ಕನ್ನಡಕದ ಕ್ಯಾಟ್ ಐ ಫ್ರೇಮ್ ಖ್ಯಾತಿಯ ಅಲ್ಟಿನಾ ಷಿನಾಸಿಗೆ ಗೂಗಲ್ ಡೂಡಲ್ ಗೌರವ

(ನ್ಯೂಸ್ ಕಡಬ) newskadaba.com ಅಮೆರಿಕ, ಆ. 04. ಅಮೆರಿಕದ ಡಿಸೈನರ್, ಕಿರು ಸಾಕ್ಷ್ಯಚಿತ್ರ ನಿರ್ಮಾಪಕಿ ಆಲ್ಟಿನಾ ಚಿನಾಸಿಗೆ ಇಂದು (ಆಗಸ್ಟ್ 4) ಜನ್ಮದಿನ. ಈ ದಿನದಂದು ಗೂಗಲ್​ ಕಡೆಯಿಂದ ಅವರಿಗೆ ಗೌರವ ಸಲ್ಲಿಸಲಾಗಿದೆ. ಡೂಡಲ್​​ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಫ್ಯಾಷನ್​ ಲೋಕಕ್ಕೆ ಅವರು ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಸೋಶಿಯಲ್ ಮೀಡಿಯಾದಲ್ಲೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಆಲ್ಟಿನಾ ಅವರು 1907ರಲ್ಲಿ ಅಮೆರಿಕದ ನ್ಯೂಯಾರ್ಕ್​ ನಗರದಲ್ಲಿ ಜನಿಸಿ, 1999ರ ಆಗಸ್ಟ್ 19ರಂದು ಮೃತಪಟ್ಟರು.

ಕ್ಯಾಟ್ ಐ ಕನ್ನಡಕದ ಫ್ರೇಮ್ ​ನ ಕಂಡು ಹಿಡಿದ ಖ್ಯಾತಿ ಆಲ್ಟಿನಾಗೆ ಸಲ್ಲಿಕೆ ಆಗುತ್ತದೆ. ವಿವಿಧ ಕ್ಷೇತ್ರದಲ್ಲಿ ಅವರು ಗುರುತಿಸಿಕೊಂಡಿರುವ ಇವರು, ‘ಜಾರ್ಜ್ ಗ್ರೋಸ್ಜ್ ಇಂಟರ್​ ಗಂಮ್’ ಹೆಸರಿನ ಕಿರು ಸಾಕ್ಷ್ಯಚಿತ್ರವನ್ನು ಕೂಡಾ ನಿರ್ಮಾಣ ಮಾಡಿದ್ದರು. ಈ ಕಿರುಚಿತ್ರ 1960ರಲ್ಲಿ ರಿಲೀಸ್ ಆಗಿತ್ತು. ವೆನಿಸ್ ಚಲನ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಕಿರುಸಾಕ್ಷ್ಯ ಚಿತ್ರವನ್ನು ಅಕಾಡೆಮಿಯವರು ಸಂರಕ್ಷಿಸಿ ಇಟ್ಟಿದ್ದಾರೆ.

Also Read  ಮುಖಕ್ಕೆ ಕೇಕ್ ಹಚ್ಚಿದ ಪತಿ- ಮದುವೆ ಕ್ಯಾನ್ಸಲ್ ಮಾಡಿದ ಯುವತಿ

error: Content is protected !!
Scroll to Top