ಚಲಿಸುತ್ತಿದ್ದ ರೈಲಿನಡಿಯಲ್ಲಿ ಆಟವಾಡುತ್ತಿದ್ದ ಮಕ್ಕಳು..!

(ನ್ಯೂಸ್ ಕಡಬ) newskadaba.com ರಾಂಚಿ, ಆ. 04. ಚಲಿಸುತ್ತಿರುವ ಗೂಡ್ಸ್‌ ರೈಲಿನಡಿಯಲ್ಲಿ ನಾಲ್ವರು ಮಕ್ಕಳು ಅಡಗಿ, ಆಟ ಆಡುತ್ತಿದ್ದ ಘಟನೆ ಜಾರ್ಖಂಡ್‌ನ‌ ಪಶ್ಚಿಮ ಸಿಂಗ್ಭೂಮ್‌ ಜಿಲ್ಲೆಯಿಂದ ವರದಿಯಾಗಿದೆ.

ಸುರಕ್ಷತೆಯನ್ನು ಲೆಕ್ಕಿಸದೇ ಮಕ್ಕಳು ಚಲಿಸುತ್ತಿರುವ ರೈಲಿನಡಿಯಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗೂಡ್ಸ್‌ ರೈಲು ನಿಂತ ವೇಳೆ ತಪಾಸಣೆ ನಡೆಸುತ್ತಿದ್ದ ಕಾರ್ಮಿಕ ಈ ದೃಶ್ಯವನ್ನು ಗಮನಿಸಿದ್ದು, ಈ ಕುರಿತು ಆತ ವಿಡಿಯೋ ಮಾಡಿದ್ದಲ್ಲದೇ ಸಂಬಂಧಪಟ್ಟ ರೈಲು ಮತ್ತು ಗಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.

 

Also Read  ಕನ್ನಡ ರಾಜ್ಯೋತ್ಸವ ಆಚರಣೆ

ಈ ಮಕ್ಕಳು ಸಿಂಗ್ಭೂಮ್‌ ಜಿಲ್ಲೆಯ ಸರಂದಾ ಪ್ರದೇಶಕ್ಕೆ ಸೇರಿದವರಾಗಿದ್ದು, ಮತ್ತೊಮ್ಮೆ ಈ ರೀತಿಯ ಅಪಾಯದ ಆಟಗಳಲ್ಲಿ ತೊಡಗದಂತೆ ಬುದ್ಧಿ ಹೇಳಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

error: Content is protected !!
Scroll to Top