ಅಡ್ಡಹೊಳೆಯಿಂದ ಸಂಪಾಜೆಗೆ ಆಗಮಿಸಿದರೇ ನಕ್ಸಲರು…? ► ಕಾಡು ಪ್ರದೇಶದ ಎರಡು ಮನೆಗಳಿಗೆ ಭೇಟಿ ನೀಡಿದ ಮೂವರ ತಂಡ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.03. ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಇತ್ತೀಚಿಗೆ ಶಿರಾಡಿ ಗ್ರಾಮದ ಅಡ್ಡಹೊಳೆ ಪರಿಸರಕ್ಕೆ ಆಗಮಿಸಿದ್ದ ನಕ್ಸಲರ ತಂಡ ಶುಕ್ರವಾರದಂದು ಸಂಪಾಜೆಯಲ್ಲಿ ಎರಡು ಮನೆಗಳಿಗೆ ಭೇಟಿ ನೀಡಿದ್ದಾರೆ.

ನಕ್ಸಲರ ಆಗಮನದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಿರಾಡಿ ಗ್ರಾಮದ ಅಡ್ಡಹೊಳೆ ಪರಿಸರದಲ್ಲಿ ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ನಡೆಸಲಾಗಿದ್ದು, ತಮ್ಮ ಕಾರ್ಯಕ್ಷೇತ್ರವನ್ನು ಬದಲಾಯಿಸಿರುವ ನಕ್ಸಲರು ಇದೀಗ ಕೊಡಗು ಜಿಲ್ಲೆಯ ಗಡಿಭಾಗವಾದ ಸಂಪಾಜೆಯಲ್ಲಿ ಕಂಡುಬಂದಿದ್ದಾರೆ. ಸಂಪಾಜೆ ಗ್ರಾಮದ ಕೊಯಿನಾಡು ನಿವಾಸಿ ದಯಾನಂದ ಹಾಗೂ ಇನ್ನೆರಡು ಮನೆಗಳಿಗೆ ಮೂವರ ತಂಡ ಭೇಟಿ ನೀಡಿದೆ. ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ನಕ್ಸಲರು ಕಾರ್ಯನಿರ್ವಹಿಸುತ್ತಿದ್ದು, ಕಾಡು ಪರಿಸರದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.

Also Read  ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ)ಬೆಳ್ಳಾರೆ ,ಎಸ್ಕೆ ಎಸ್ಸೆಸ್ಸೆಫ್ ಬೆಳ್ಳಾರೆ ವತಿಯಿಂದ ಈದ್ ಮೀಲಾದ್ ಸಂಭ್ರಮ;ವಿದ್ಯಾ ಸಂಸ್ಥೆ ಹಾಗೂ ಬೆಳ್ಳಾರೆ ಠಾಣೆಗೆ ಸಿಹಿತಿಂಡಿ ವಿತರಣೆ

error: Content is protected !!
Scroll to Top