ಸುಳ್ಯ: ಪತ್ನಿಗೆ ಕಿರುಕುಳ- ಕೊಲೆ ಯತ್ನ – ಆರೋಪಿ ಪತಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 03. ಪತಿಯೋರ್ವ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿರುವ ಕುರಿತು ತಾಲೂಕಿನ ಅಜ್ಜಾವರ ಗ್ರಾಮದಿಂದ ವರದಿಯಾಗಿದೆ.

ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ನಿವಾಸಿ ಅಬ್ದುಲ್ ನವಾಝ್ ಎಂಬಾತ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಇವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಈ ಕುರಿತು ಪತ್ನಿ, ಪತಿಯು ತನಗೆ ಕಿರುಕುಳ ನೀಡುವುದಲ್ಲದೇ, ಕೊಲೆಗೆ ಯತ್ನಿಸಿದ್ದಾರೆಂದು ಗಂಡನ ವಿರುದ್ಧ ಮಹಿಳಾ ಪೋಲೀಸರಿಗೆ ದೂರು ನೀಡಿದ್ದರು.

ದೂರಿನಲ್ಲಿ ವರದಕ್ಷಿಣೆ ಕಿರುಕುಳ, ದಿನನಿತ್ಯ ಹಲ್ಲೆ, ದಿಂಬನ್ನು ಮುಖಕ್ಕೆ ಒತ್ತಿಹಿಡಿದು ಉಸಿರು ಗಟ್ಟಿಸಿ ವಿಕೃತವಾಗಿ ವರ್ತಿಸುವುದು ಹಾಗೂ ತನ್ನ ತಂದೆಗೆ ಕೊಲೆ ಮಾಡುವುದಾಗಿ ಬೆದರಿಸುವುದಾಗಿ ಉಲ್ಲೇಖಿಸಲಾಗಿತ್ತು. ದೂರಿನಂತೆ ಸುಳ್ಯ ಠಾಣೆಯ ಪೋಲಿಸರು ಆರೋಪಿ ಯುವಕ ಅಬ್ದುಲ್ ನವಾಝ್ ನನ್ನು ಬಂಧಿಸಿ, ಆ. 03ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದುಬಂದಿದೆ.

Also Read  ಬೆಳ್ತಂಗಡಿ: ಆಕ್ಟಿವಾ - ಕಾರು ನಡುವೆ ಅಪಘಾತ ► ಕಾಲೇಜು ವಿದ್ಯಾರ್ಥಿ ಮೃತ್ಯು

error: Content is protected !!
Scroll to Top