ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಬಸ್

(ನ್ಯೂಸ್ ಕಡಬ)newskadaba.com ಸಾಗರ, ಆ.03. ವಿದ್ಯುತ್‌ ಕಂಬಕ್ಕೆ ಖಾಸಗಿ ಬಸ್‌ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿನಿಯರಿಗೆ ಕರೆಂಟ್‌ ಶಾಕ್‌ ತಗುಲಿದ ಘಟನೆ ನಡೆದಿದೆ.


ಹೊಳೆ ಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್‌ ಚಾಲಕ ಎದುರಿನಲ್ಲಿ ಬರುತ್ತಿದ್ದ ಬೈಕ್‌ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ರಸ್ತೆ ಪಕ್ಕಕ್ಕೆ ಬಸ್‌ ಚಲಾಯಿಸಿದ್ದಾರೆ. ಈ ವೇಳೆ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್‌ ತಂತಿ ಬಸ್‌ ಮೇಲೆ ಬಿದ್ದು ಬಸ್‌ನಲ್ಲಿ ವಿದ್ಯುತ್‌ ಪ್ರವಹಿಸಿದ್ದರಿಂದ ಇಬ್ಬರು ವಿದ್ಯಾರ್ಥಿನಿಯರು ಪ್ರಜ್ಞೆ ಕಳೆದುಕೊಂಡಿದ್ದಾರೆ.

ತಕ್ಷಣ ಅಸ್ವಸ್ಥ ವಿದ್ಯಾರ್ಥಿನಿಯರಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿದೆ. ಬಸ್ಸಿನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದು ಯಾರಿಗೂ ಅಪಾಯ ಸಂಭವಿಸಿಲ್ಲ.

error: Content is protected !!
Scroll to Top