ಸುಬ್ರಹ್ಮಣ್ಯ- ಮಂಗಳೂರು ನಡುವೆ ಹೊಸ ರೈಲು ಸಂಚಾರ – ಕೇಂದ್ರ ರೈಲ್ವೇ ಸಚಿವರಿಗೆ ಕಟೀಲ್ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 03. ರೈಲ್ವೇ ಇಲಾಖೆಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಸೆಂಟ್ರಲ್ ರೈಲ್ವೇ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಾಣ, ಬೆಂಗಳೂರು – ಮಂಗಳೂರು ರೈಲ್ವೇ ಲೈನ್ ಮೇಲ್ದರ್ಜೆಗೆ ಮತ್ತು ವಿದ್ಯುದೀಕರಣ, ಮಂಗಳೂರಿನಿಂದ ವಾರಣಾಸಿ- ಮಂಗಳೂರು-ರಾಮೇಶ್ವರಂ ಹಾಗೂ ಮಂಗಳೂರು- ಬೀದರ್ ಮಧ್ಯೆ ಹೊಸ ರೈಲುಗಳನ್ನು ಸ್ಥಾಪಿಸುವಂತೆ ತಿಳಿಸಲಾಗಿತ್ತು. ಅಲ್ಲದೇ ತಿರುವಂತನಪುರಂ ನಿಂದ ಕಾಸರಗೋಡು ತನಕ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ಅನ್ನು ಮಂಗಳೂರಿನ ತನಕ ವಿಸ್ತರಣೆ ಮಾಡುವಂತೆಯೂ ತಿಳಿಸಲಾಗಿತ್ತು. ಇದರಿಂದ ಎರಡು ನಗರಗಳ ಮಧ್ಯೆ ಶೀಘ್ರ ಸಂಪರ್ಕ ಕಲ್ಪಸಬಹುದು. ಅಲ್ಲದೇ ಪ್ರವಾಸೋದ್ಯಮಕ್ಕೆ ಬಹು ಅನುಕೂಲವಾಗಲಿದೆ.

Also Read  ಧಾರ್ಮಿಕ ನಂಬಿಕೆಗೆ ಘಾಸಿ ➤ ವಿಡಿಯೋ ಹರಿಬಿಟ್ಟ ನಾಲ್ವರ ಬಂಧನ

ಸುಬ್ರಹ್ಮಣ್ಯ ರೋಡ್‌ನಿಂದ ಮಂಗಳೂರಿಗೆ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೊಸ ರೈಲನ್ನು ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಟರ್ಮಿನಲ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ, ಈ ಭಾಗದ ರೈಲ್ವೇ ಉನ್ನತೀಕರಣ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಚಿವರಿಗೆ ಸಲ್ಲಿಸಲಾಯಿತು.

error: Content is protected !!
Scroll to Top