ಬೆಳೆ ವಿಮೆ ಪ್ರೀಮಿಯಂ ಪಾವತಿಸಿದವರಿಗೆ ಆ. 14 ರವರೆಗೆ ದಾಖಲೆ ಸಲ್ಲಿಕೆಗೆ ಅವಕಾಶ !

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.03. ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಮೊತ್ತವನ್ನು ಸಹಕಾರಿ ಸಂಘ ಹಾಗೂ ಬ್ಯಾಂಕ್‌ಗಳಲ್ಲಿ ಪಾವತಿಸಿರುವ ರೈತರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಆ.14ರವರೆಗೆ ಅವಕಾಶ ನೀಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.


ಈ ಬಾರಿ ಪ್ರೀಮಿಯಂ ಪಾವತಿಗೆ ಫ್ರೂಟ್ಸ್‌ ಐಡಿ ಕಡ್ಡಾಯವಾಗಿದ್ದು, ಇದನ್ನು ಪಡೆಯಲು ರೈತರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ವಿರಳ ಕಾಲಾವಕಾಶದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ರೈತರ ಅನುಕೂಲಕ್ಕಾಗಿ ದಾಖಲೆಗಳನ್ನು ಸಲ್ಲಿಸುವುದಕ್ಕೆ ಈಗ ಕಾಲಾವಕಾಶ ಕಲ್ಪಿಸಲಾಗಿದೆ.

Also Read  ರಸ್ತೆ ಅಪಘಾತ ➤ ಬಾಲಕಿ ಸ್ಥಳದಲ್ಲೇ ಮೃತ್ಯು..!!!

error: Content is protected !!
Scroll to Top