“ವಂದೇ ಭಾರತ್ ಎಕ್ಸ್‌ ಪ್ರೆಸ್”- ಶೀಘ್ರದಲ್ಲೇ ಬೆಂಗಳೂರಿನಿಂದ ಹೈದರಾಬಾದ್‌ಗೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 03. ದೇಶದಲ್ಲಿ ಈಗಾಗಾಲೇ ವಂದೇ ಭಾರತ್ ರೈಲು ತನ್ನ ಪ್ರಯಾಣವನ್ನು ಮುಂದುವರಿಸಿದ್ದು, ಹೆಚ್ಚಿನ ಪ್ರಯಾಣಿಕರು ಇದರಲ್ಲಿಯೇ ಪ್ರಯಾಣವನ್ನು ಮಾಡುತ್ತಿದ್ದಾರೆ. ಇದೀಗ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡಿರುವ ರೈಲ್ವೇ ಸಚಿವಾಲಯವು ವಂದೇ ಭಾರತ್ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಅದರಂತೆ ಶೀಘ್ರದಲ್ಲೇ ಬೆಂಗಳೂರಿನಿಂದ ಹೈದ್ರಾಬಾದ್ ಗೆ ವಂದೇ ಭಾರತ್ ಎಕ್ಸ್ ಪ್ರೆಸ್ ಸಂಚರಿಸಲಿದೆ.

  

ರೈಲ್ವೇ ಸಚಿವಾಲಯದ ಪ್ರಕಾರ, ಇನ್ನು ಮೂರು ಹೊಸ ವಂದೇ ಭಾರತ್ ರೈಲುಗಳು ಆಗಸ್ಟ್ 15 ರ ಮೊದಲು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಇವುಗಳ ಪೈಕಿ ಒಂದನ್ನು ಬೆಂಗಳೂರಿನಿಂದ ಹೈದರಾಬಾದ್‌ಗೆ ಮತ್ತು ಇನ್ನೊಂದನ್ನು ಪಾಟ್ನಾದಿಂದ ಹೌರಾಕ್ಕೆ ಮತ್ತು ಮೂರನೇ ರೈಲಿನ ಮಾರ್ಗದ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎನ್ನಲಾಗಿದೆ.

Also Read  ➤ಇನ್ ಸ್ಟಾಗ್ರಾಮ್ ರೀಲ್ಸ್ ➤ಕಾಲು ಜಾರಿ ಬಿದ್ದು ಯುವಕ ಮೃತ್ಯು..!


ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ವಂದೇ ಭಾರತ್ ರೈಲುಗಳು ಕಾರ್ಯ ಪ್ರಾರಂಭಿಸಿದ್ದು, ಎರಡು ರೈಲುಗಳನ್ನು ಕಾಯ್ದಿರಿಸಲಾಗಿದೆ. ವಂದೇ ಭಾರತ್‌ ರೈಲಿನಲ್ಲಿ ಯಾವುದೇ ದೋಷ ಕಂಡುಬಂದಲ್ಲಿ, ಮೀಸಲಿರಿಸಲಾಗಿರುವ ಈ ಎರಡೂ ರೈಲುಗಳನ್ನು ಓಡಿಸಬಹುದು. ರೈಲ್ವೇ ಸಚಿವಾಲಯದ ಪ್ರಕಾರ, ಈ ಮೂರು ರೈಲುಗಳು ತನ್ನ ಕಾರ್ಯಾಚರಣೆಯನ್ನು ಆಗಸ್ಟ್ 15 ರ ಮೊದಲು ಪ್ರಾರಂಭಿಸಬಹುದು.

error: Content is protected !!
Scroll to Top