ಮೊಬೈಲ್ ಚಾರ್ಜ್ ವೇಳೆ ಚಾರ್ಜರ್ ವೈರನ್ನು ಕಚ್ಚಿದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಫೆ.02. ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆ ಚಾರ್ಜರ್ ವೈರ್ ಅನ್ನು ಕಚ್ಚಿದ ಪರಿಣಾಮ ಮಗುವೊಂದು ಮೃತಪಟ್ಟ ಘಟನೆ ಜಿಲ್ಲೆಯ ಆಲ್ದೂರಿನಲ್ಲಿ ನಡೆದಿದೆ.

ಮೃತ ಮಗುವನ್ನು ಆಲ್ದೂರು ನಿವಾಸಿ ಇಂದ್ರೇಶ್ ಎಂಬವರ ಪುತ್ರ ಅಭಿಷೇಕ್(4) ಎಂದು ಗುರುತಿಸಲಾಗಿದೆ. ಮೊಬೈಲ್ ಚಾರ್ಜ್ ಆಗುತ್ತಿದ್ದ ವೇಳೆ ಪಕ್ಕದಲ್ಲಿದ್ದ ಅಭಿಷೇಕ್ ಆಟವಾಡುತ್ತಾ ಚಾರ್ಜರ್ ವೈರ್ ನ್ನು ಬಾಯಲ್ಲಿ ಕಚ್ಚಿದ್ದು, ತಕ್ಷಣ ವಿದ್ಯುತ್ ಶಾಕ್ ಹೊಡೆದು ಗಂಭೀರ ಗಾಯಗೊಂಡಿದ್ದ ಅಭಿಷೇಕ್ ನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಭಿಷೇಕ್ ಮೃತಪಟ್ಟ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಫೆ.10 ರಂದು ಪೌರಕಾರ್ಮಿಕರ ಮಕ್ಕಳಿಗೆ 'ಪ್ರತಿಭಾ ಪುರಸ್ಕಾರ', ಟ್ಯಾಬ್ ವಿತರಣೆ

error: Content is protected !!
Scroll to Top