ನಾಳೆಯಿಂದ ಲಾಲ್ ಬಾಗ್ ನಲ್ಲಿ ‘ಫ್ಲವರ್ ಶೋ’ ಆರಂಭ- ಸಿಎಂ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 03. ನಾಳೆಯಿಂದ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ಆರಂಭವಾಗಲಿದ್ದು, ನಾಳೆ ಸಂಜೆ 6 ಗಂಟೆಗೆ ಸಿಎಂ‌ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

ಈ ಬಾರಿ ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯ ರವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಹಮ್ಮಿಕೊಳ್ಳಲಾಗಿದ್ದು, ನಾಳೆಯಿಂದ ಆರಂಭವಾಗಿ ಆಗಸ್ಟ್ 15ರವರೆಗೆ ಫ್ಲವರ್ ಶೋ ನಡೆಯಲಿದೆ.

ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು ಈ ಪುಷ್ಪ ಪ್ರದರ್ಶನವನ್ನು ಆಯೋಜನೆ ಮಾಡುತ್ತಿದ್ದು, ಈ ವಾರ್ಷಿಕ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಲಾಲ್ ಬಾಗ್‌ ನಲ್ಲಿರುವ ಗಾಜಿನ ಮನೆಯಲ್ಲಿ ದೇಶದ ಎಲ್ಲಾ ಭಾಗಗಳಿಂದ ಸಂಗ್ರಹಿಸಲಾದ ವ್ಯಾಪಕ ಶ್ರೇಣಿಯ ಹೂವುಗಳ ಪ್ರದರ್ಶನವಿದ್ದು, ಗಿರಿಧಾಮಗಳಲ್ಲಿ ಮಾತ್ರ ಕಾಣಸಿಗುವ ಹಲವು ಅಪರೂಪದ ಹೂವುಗಳನ್ನು ಗಾಜಿನ ಮನೆಯೊಳಗೆ ಕಾಣಹುದಾಗಿದೆ.

Also Read  ಕಾನೂನು ಪ್ರಾಧಿಕಾರ : ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

error: Content is protected !!
Scroll to Top