ಭಾರತಕ್ಕೆ ಬಂದ ಪಾಕ್ ಸೀಮಾಗೆ ಸಿನಿಮಾದಲ್ಲಿ ನಟಿಸುವ ಬಂಪರ್ ಆಫರ್

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 03. ಪಬ್‌ಜಿ ಗೇಮ್ ಮೂಲಕ ಪರಿಚಯವಾದ ಪ್ರಿಯಕರನಿಗೋಸ್ಕರ ಪಾಕಿಸ್ತಾನದಿಂದ ಮಕ್ಕಳ ಸಮೇತ ಭಾರತಕ್ಕೆ ಬಂದಿದ್ದ ಸೀಮಾ ಹೈದರ್‌ಗೆ ಸಿನಿಮಾದಲ್ಲಿ ನಟಿಸುವ ಭರ್ಜರಿ ಆಫ‌ರ್ ದೊರಕಿದೆ.

ಬಾಲಿವುಡ್ ನಿರ್ದೇಶಕರೊಬ್ಬರು ಸೀಮಾಗೆ ಸಿನಿಮಾದಲ್ಲಿ ಅವಕಾಶ ನೀಡಲು ಮುಂದಾಗಿದ್ದಾರೆ. ಅಲ್ಲದೇ, ಸೀಮಾ ಪತಿಗೆ ಬೆಂಬಲವಾಗಿ ಗುಜರಾತ್‌ನ ಕಂಪನಿಯೊಂದು ಕೆಲಸದ ಆಫರ್ ಕೊಟ್ಟಿದೆ ಎನ್ನಲಾಗಿದೆ. ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದ ಬಗ್ಗೆ ಹೇಳಿಕೊಂಡ ಸೀಮಾಳ ವಿಡಿಯೊವೊಂದು ಇತ್ತೀಚೆಗೆ ವೈರಲ್ ಆಗಿತ್ತು.


ಸೀಮಾ ಪ್ರಿಯಕರ ಸಚಿನ್‌ ಅವರ ಮನೆ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ನಲ್ಲಿ ಪತ್ರವೊಂದನ್ನು ಕಳುಹಿಸಲಾಗಿದೆ. ಸೀಮಾ ಹಾಗೂ ಸಚಿನ್ ಅವರಿಗೆ ವಾರ್ಷಿಕ 6 ಲಕ್ಷ ರೂ. ಪ್ಯಾಕೇಜ್‌ನ ಉದ್ಯೋಗ ನೀಡುವ ಭರವಸೆಯನ್ನು ಆ ಪತ್ರದಲ್ಲಿ ತಿಳಿಸಲಾಗಿರುವುದಾಗಿ ವರದಿಯಾಗಿದೆ.

Also Read  ಕೈದಿಗಳಿಗೆ ಮಾದಕ ದ್ರವ್ಯ ಪೂರೈಕೆ ➤ ಜೈಲು ಸಿಬ್ಬಂದಿ ಅರೆಸ್ಟ್..!!

error: Content is protected !!
Scroll to Top