(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ದ.ಕ ಜಿಲ್ಲೆಯಲ್ಲಿ ರಚನೆಗೊಂಡ ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ. ಕಡಬ ತಾಲೂಕಿಗೆ ಅಗತ್ಯ ಕಚೇರಿಗೆ ಸ್ಥಳಾಂತರ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎನ್ನಲಾಗಿದೆ.
ಸಿಬ್ಬಂದಿ ಕೊರತೆ ಹೋಗಲಾಡಿಸಲು ನಿಯೋಜಿತರಿಗೆ ವೇಳಾಪಟ್ಟಿ ಪ್ರಕಾರ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗುವುದು. ಸರ್ಕಾರಿ ಹಂತದಲ್ಲಿ ನೇಮಕಾತಿ, ಅನುದಾನ ಇತ್ಯಾದಿಗಳ ಕುರಿತು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ಹೇಲಿದರು ಎಂದು ವರದಿ ತಿಳಿಸಿದೆ.
ಕಡಬ, ಮುಲ್ಕಿ, ಉಳ್ಳಾಲ, ಮೂಡಬಿದ್ರೆ ಮೊದಲಾದ ಹೊಸ ತಾಲೂಕುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಲಭ್ಯವಾಗಲಿದೆ ಎಂದು ಅವರು ಹೇಳಿದರು ಎನ್ನಲಾಗಿದೆ.