(ನ್ಯೂಸ್ ಕಡಬ) newskadaba.com ಆ. 03. ಇನ್ನುಮುಂದೆ ವಾಟ್ಸಾಪ್ ಗಳಲ್ಲಿ ಕೆಂಪು ಬಣ್ಣದ ಹಾರ್ಟ್ ಸಿಂಬಲ್ ಕಳುಹಿಸಿದವರಿಗೆ ಜೈಲು ಶಿಕ್ಷೆ ಗ್ಯಾರಂಟಿ. ಇಂತಹ ಕಠಿಣ ಕಾನೂನು ಕುವೈತ್‌ನಲ್ಲಿ ಜಾರಿಯಾಗ್ತಿದೆ.
ಇನ್ನುಮುಂದೆ ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ. ಇಂತದೊಂದು ಕಾನೂನನ್ನು ಕುವೈತ್ ಸರ್ಕಾರ ಜಾರಿಗೆ ತಂದಿದೆ.
ಸೌದಿ ಅರೇಬಿಯಾದಲ್ಲೂ ಕೂಡ ಈ ರೀತಿಯ ನಡವಳಿಕೆಯನ್ನು ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ಕುವೈತ್ ಮತ್ತು ಸೌದಿ ಅರೇಬಿಯಾಗಳಲ್ಲಿ ಇನ್ಮುಂದೆ ಹುಡುಗಿಯರಿಗೆ ಯಾರು ಕೂಡಾ ಹಾರ್ಟ್ ಇಮೋಜಿಗಳನ್ನು ಕಳಿಸುವಂತಿಲ್ಲ. ಪ್ರಮುಖ ಸೋಷಿಯಲ್ ಮೀಡಿಯಾಗಳಾದ ವಾಟ್ಸಾಪ್, ಫೇಸ್‌ಬುಕ್‌ಗಳಲ್ಲಿ ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸಿದ್ರೆ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ಕುವೈತ್‌ನಲ್ಲಿ ಈ ರೀತಿಯ ಹೃದಯದ ಎಮೋಜಿಯನ್ನು ಕಳುಹಿಸಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಸಾವಿರ ಕುವೈತ್ ದಿನಾರ್‌ಗಳ ದಂಡ ಕಟ್ಟಬೇಕಾಗಿದೆ.