ಲಂಚ ಸ್ವೀಕಾರ ಆರೋಪ – ಕರ್ನಾಟಕದ ಪೊಲೀಸರು ಕೇರಳದಲ್ಲಿ ವಶಕ್ಕೆ

(ನ್ಯೂಸ್ ಕಡಬ) newskadaba.com ತಿರುವನಂತಪುರಂ, ಆ. 03. ಕ್ರಿಪ್ಟೋ ಕರೆನ್ಸಿ ತನಿಖೆಗಾಗಿ ಕೇರಳಕ್ಕೆ ಬಂದಿದ್ದ ಬೆಂಗಳೂರು ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‌ ಪೆಕ್ಟರ್ ಸೇರಿ ನಾಲ್ವರು ಅಧಿಕಾರಿಗಳನ್ನು ಲಂಚ ಸ್ವೀಕರಿಸಿದ ಆರೋಪದಡಿಯಲ್ಲಿ ಕೇರಳದ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಕುರಿತು ವರದಿಯಾಗಿದೆ.

ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಇನ್ಸ್‌ ಪೆಕ್ಟರ್ ಶಿವಪ್ರಕಾಶ್, ಸಿಬ್ಬಂದಿಗಳಾದ ವಿಜಯ್‌ಕುಮಾರ್ ಎ ಎಚ್‌ಸಿ, ಶಿವನಿ ಎಚ್‌ಸಿ ಮತ್ತು ಸಂದೇಶ್ ಬಂಧಿತ ಅಧಿಕಾರಿಗಳು ಎಂದು ತಿಳಿದು ಬಂದಿದೆ. ಬಂಧಿತರಾಗಿರುವ ವೈಟ್ ಫೀಲ್ಡ್ ಪೊಲೀಸರು ಕೊಚ್ಚಿಯ ಕುಂಬಲಂಗಿಯಿಂದ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಈ ಇಬ್ಬರನ್ನು ಬಿಡುಗಡೆ ಮಾಡಲು 10 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 4 ಲಕ್ಷ ರೂ. ಪಾವತಿಸಿದ ಹೊರತಾಗಿಯೂ ಪೊಲೀಸ್ ಅಧಿಕಾರಿಗಳು ಇಬ್ಬರನ್ನು ಬಿಡುಗಡೆ ಮಾಡಿರಲಿಲ್ಲ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಪೊಲೀಸರು ವಾಹನ ಹಾಗೂ ನಗದನ್ನು ಪತ್ತೆ ಹಚ್ಚಿದ್ದಾರೆ ಎಂದು ಈ ಬಗ್ಗೆ ಮಲಯಾಳಂ ಮಾಧ್ಯಮಗಳು ವರದಿ ಮಾಡಿವೆ.

Also Read  ಇಂದಿನಿಂದ ಮೂರು ದಿನ 'ಯುವ ಕಾಂಗ್ರೆಸ್ ಸಮಾವೇಶ'

error: Content is protected !!
Scroll to Top