ಶಾಲಾ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ತಂಡದಿಂದ ಹಲ್ಲೆ..!

(ನ್ಯೂಸ್ ಕಡಬ)newskadaba.com ಬೇಕೂರು, ಆ.03. ಶಾಲಾ ವಿದ್ಯಾರ್ಥಿಯ ಮೇಲೆ ಸೀನಿಯರ್ ವಿದ್ಯಾರ್ಥಿಗಳ ತಂಡವೊಂದು ರ‍್ಯಾಗಿಂಗ್ ನಡೆಸಿದ ಆರೋಪ ಕೇಳಿಬಂದಿದೆ.

ಗಾಯಗೊಂಡ ಪ್ಲಸ್ ವನ್‌ ವಿದ್ಯಾರ್ಥಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ಶಾಲೆ ಬಿಟ್ಟ ಬಳಿಕ ಸಮೀಪದ ಬಸ್‌ ತಂಗುದಾಣದಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಅದೇ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿಗಳ ತಂಡವೊಂದು ಶೂ ಧರಿಸಿರುವುದಕ್ಕೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ.

ವಿದ್ಯಾರ್ಥಿಗೆ ಹಲ್ಲೆಯಿಂದ ಕಿವಿ ತಮ್ಮಟೆಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Also Read  ಹಜ್ ಭವನ ನಿರ್ಮಾಣದ ಝಮೀರ್ ಅಹ್ಮ್ ಹೇಳಿಕೆ ಸ್ವಾಗತಾರ್ಹ ➤ ಜಿಲ್ಲಾ ಕಾಂಗ್ರೆಸ್ ಸದಸ್ಯ ಎಂ.ಪಿ. ಮೊಯ್ದಿನಬ್ಬ

 

error: Content is protected !!
Scroll to Top