ಯುಎಇಯಲ್ಲಿ 45ಕೋಟಿ ಬಹುಮಾನ ಗೆದ್ದ ಭಾರತೀಯ..!

(ನ್ಯೂಸ್ ಕಡಬ)newskadaba.com ಮುಂಬೈ, ಆ.03. ಯುಎಇ ನಲ್ಲಿ ಮುಂಬೈ ಮೂಲದ ವ್ಯಕ್ತಿಯೋರ್ವ ಬರೊಬ್ಬರಿ 45 ಕೋಟಿ ರೂ.ಬಹುಮಾನ ಗೆದ್ದಿದ್ದು, ಅದೃಷ್ಟವೇ ಬದಲಾಗಿದೆ ಎಂದು ವರದಿಯಾಗಿದೆ.

ಸಚಿನ್‌ (47) ಎಂಬುವವರು 25 ವರ್ಷದಿಂದ ದುಬೈನಲ್ಲಿ ನೆಲೆಸಿದ್ದು, ಸಚಿನ್‌ ಸಿಎಡಿ ತಂತ್ರಜ್ಞರಾಗಿದ್ದು 139ನೇ ಮಾಜೂಜ್‌ ಡ್ರಾ ಬಹುಮಾನ ಗೆದ್ದಿದ್ದಾರೆ ಎನ್ನಲಾಗಿದೆ.

45 ಕೋಟಿ ಬಹುಮಾನ ಗೆದ್ದ ಬಳಿಕ ಮಾತನಾಡಿದ ಸಚಿನ್, ಪ್ರತಿ ವಾರ ಮಜೂಜ್‌ನಲ್ಲಿ ಭಾಗವಹಿಸುತ್ತಿದ್ದೆ. ಒಂದು ದಿನ ಗೆಲುವಿನ ನಿರೀಕ್ಷೆ ಇತ್ತು. ಈ ಗೆಲುವು ನನ್ನ ಕುಟುಂಬದ ಜೀವನವನ್ನು ಬದಲಾಯಿಸುತ್ತದೆ ಎಂದು ಸಚಿನ್‌ ಹೇಳಿದ್ದಾರೆ. ಮುಂಬೈ ಮೂಲದ ಸಚಿನ್ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಯುಎಇನಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Also Read  ಐವರಿ ಕೋಸ್ಟ್‌ನ ಮಾಜಿ ಫುಟ್ಬಾಲ್ ಆಟಗಾರ ಕುಸಿದು ಬಿದ್ದು ಮೃತ್ಯು

 

 

error: Content is protected !!
Scroll to Top