ಮಾದಕ ವಸ್ತು ಎಂಡಿಎಂಎ ಮಾರಾಟ….! – ಮೂವರು ಆರೋಪಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಡ್ರಗ್ಸ್ ಮುಕ್ತ ಮಂಗಳೂರು ನಗರ ನಿರ್ಮಿಸುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮೂಲತಃ ಸಜಿಪ ಉಳ್ಳಾಲದ ಹಫೀಝ್ ಯಾನೆ ಅಪ್ಪಿ(35), ಸಜಿಪ ಮುನ್ನೂರಿನ ಅಮೀರ್ ಯಾನೆ ಅಮ್ಮಿ(34) ಎಂದು ಗುರುತಿಸಲಾಗಿದೆ.


ತಲಪಾಡಿ-ದೇವಿಪುರ ರಸ್ತೆಯಲ್ಲಿನ ತಚ್ಚಾಣಿ ಪರಸರದಲ್ಲಿ ಕಾರಿನಲ್ಲಿ ಮೂವರು ಮಾದಕ ವಸ್ತುವಾದ ಎಂಡಿಎಂಎ ಯನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಿಷೇಧಿತ ಮಾದಕ ವಸ್ತು ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

Also Read  ಬಿಪಿಎಲ್, ಅಂತ್ಯೋದಯಕ್ಕೆ ಇನ್ನು ನೇರ ನಗದು ಇಲ್ಲ, ಬದಲಿಗೆ ಆಹಾರ ಕಿಟ್

error: Content is protected !!
Scroll to Top