ಕೆಮ್ಮಾರ ಶಾಲೆಯಲ್ಲಿ ಉಚಿತ ಸೇವೆಗೈದ ಗೌರವ ಉಪನ್ಯಾಸಕಿ ಕು|ಅಝ್ಮಿಯಾಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 03. ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗೌರವ ಉಪನ್ಯಾಸಕಿಯಾಗಿ ಉಚಿತವಾಗಿ ಸೇವೆ ಮಾಡುತ್ತಿದ್ದ, ಇದೇ ಶಾಲೆಯ ಹಳೇ ವಿದ್ಯಾರ್ಥಿನಿ ಕುಮಾರಿ ಅಝ್ಮಿಯಾ ರವರಿಗೆ ವಿದಾಯದ ಗೌರವ ನೀಡಿ ಶುಭ ಹಾರೈಸಲಾಯಿತು.

ತನ್ನ ಉನ್ನತ ಶಿಕ್ಷಣದ ನಿಮಿತ್ತ ಅನಿವಾರ್ಯ ಕಾರಣದಿಂದ ನಿವೃತ್ತಿ ಘೋಷಿಸಿದರು. ತಾನು ಕಲಿತ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಮಕ್ಕಳಿಗೆ ಉಚಿತವಾಗಿ ಭೋಧನೆ ಮಾಡುವ ಮೂಲಕ ಸೇವೆ ಮಾಡುತ್ತಿದ್ದ ಕುಮಾರಿ ಅಝ್ಮಿಯಾರವರ ಕಾರ್ಯ ಶ್ಲಾಘನೀಯ. ಅವರ ಮುಂದಿನ ಕಲಿಕಾ ಭವಿಷ್ಯವು ಉಜ್ವಲವಾಗಲಿ ಎಂದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಶ್ರೀ ಎಮ್ ರವರು ಶುಭಹಾರೈಸಿದರು. ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ಸ್ಮರಣಿಕೆ ನೀಡಿ ಗೌರವಿಸಿದರು.

Also Read  ಬಿಳಿನೆಲೆ : ರಸ್ತೆ ಬದಿಯಲ್ಲಿನ ಪೊದೆಗಳನ್ನು ಕಡಿದು, ಸ್ವಚ್ಚಗೊಳಿಸುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ದಿನಚಾರಣೆ

ಈ ಸಂದರ್ಭದಲ್ಲಿ ಶಾಲಾಭಿವೃಧ್ದಿ ಸಮಿತಿ ಸದಸ್ಯರಾದ ಪದ್ಮನಾಭ ಶೆಟ್ಟಿ, ಉಪಾದ್ಯಕ್ಷೆ ತೇಜಾವತಿ, ಶಿಕ್ಷಕರಾದ ವೆಂಕಟರಮಣ ಭಟ್, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮೋಹನಾಂಗಿ, ಶ್ರೀಮತಿ ಲೀನಾ ಲಸ್ರಾಡೊ, ಶ್ರೀಮತಿ ಸಂಧ್ಯಾ, ಜುನೈದ್, ಶ್ರೀಮತಿ ಮೆಹನಾಝ್ ಹಾಗೂ ಶ್ರೀಮತಿ ದಿವ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!
Scroll to Top