(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.03. ನೇತ್ರಾವತಿ ನದಿಯಲ್ಲಿ ಮಹಿಳೆಯೋರ್ವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಗುರುತು ಪತ್ತೆಗೆ ಪೊಲೀಸರು ಮನವಿ ಮಾಡಿದ್ದಾರೆ.
ಇಲ್ಲಿನ ನೇತ್ರಾವತಿ ನದಿ ನೀರಿನಲ್ಲಿ ಸುಮಾರು 50ರಿಂದ 55 ವರ್ಷದ ಮಹಿಳೆಗೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, 142 ಸೆಂ. ಮೀ. ಎತ್ತರವಿದ್ದು, ಕೆಂಪು ಬಣ್ಣದ ರವಿಕೆ ಹಾಗೂ ಹಸಿರು ಬಣ್ಣದ ಬಟ್ಟೆ ತೊಟ್ಟಿರುತ್ತಾರೆ. ಮೂಗಲ್ಲಿ ಮೂಗುತಿ ಹಾಗೂ ಬಲ ಕೈಯಲ್ಲಿ ಗುಲಾಬಿ ಬಣ್ಣದ ಗಾಜಿನ ಬಳೆಯೊಂದಿದೆ. ಆದ್ದರಿಂದ ಇವರ ಬಗ್ಗೆ ತಿಳಿದವರು ಉಪ್ಪಿನಂಗಡಿ ಪೊಲೀಸ್ ಠಾಣೆ 08251-251055 ಅಥವಾ ಜಿಲ್ಲಾ ನಿಸ್ತಂತು ವಿಭಾಗ 0824- 2220500 ಇಲ್ಲಿಗೆ ಸಂಪರ್ಕಿಸಬಹುದೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
