ಮೋದಿ ಸ್ಕೀಮ್ ಹೆಸರಿನಲ್ಲಿ ಚಿನ್ನ ದರೋಡೆ – ಕಡಬ ಠಾಣೆಯಲ್ಲಿ ದೂರು ದಾಖಲು

Theft, crime, Robbery

(ನ್ಯೂಸ್ ಕಡಬ) newskadaba.com ಕಡಬ, ಆ. 02. ಮೋದಿ ಸ್ಕೀಮ್ ನವರು ಎಂದು ನಂಬಿಸಿ ಮನೆಗೆ ಬಂದ ಅಪರಿಚಿತನೋರ್ವ ಚಿನ್ನದ ಸರ ಎಗರಿಸಿ ಪರಾರಿಯಾದ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಗ್ರಾಮದ ಪುಳಿಮರಡ್ಕ ನಿವಾಸಿ ಲಲಿತಾ ಎಂಬವರು, ಮನೆಯಿಂದ ಕಾಣಿಯೂರಿನತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ ನಿಲ್ಲಿಸಿ ಪರಿಚಯದವನಂತೆ ನಟಿಸಿ ಮಹಿಳೆಯನ್ನು ಮಾತನಾಡಿಸಿದ್ದು, ‘ನಾವು ಬಡವರಿಗೆ ಬ್ಯಾಂಕಿನ ಕಡೆಯಿಂದ ಹಣ ಡಬಲ್ ಮಾಡಿಕೊಡುವ ಮೋದಿ ಸ್ಕೀಮ್‌ನವರು. ಬನ್ನಿ ಈ ಕುರಿತು ಮನೆಯಲ್ಲಿ ಮಾತನಾಡೋಣ ಎಂದು ಹೇಳಿ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಮಹಿಳೆಯ ಮನೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಅಪರಿಚಿತನು ಮಹಿಳೆಯ ಬಳಿ 7,000 ಹಣ ನೀಡಿದ್ದಲ್ಲಿ 1 ಲಕ್ಷ ರೂ. ಹಣವನ್ನು ನೀಡುವುದಾಗಿ ತಿಳಿಸಿದ್ದು, ಮಹಿಳೆ ಹಣವಿಲ್ಲವೆಂದು ಹೇಳಿದಾಗ ಆತ ಮತ್ತೊಂದು ಆಫರ್‌ ಇದೆ ನೀವು 1 ಪವನ್‌ ಚಿನ್ನ ಕೊಟ್ಟರೆ ನಿಮಗೆ ಬ್ಯಾಂಕಿನಿಂದ 4 ಪವನ್‌ ಚಿನ್ನ ಸಿಗುತ್ತದೆ ಎಂದು ತಿಳಿಸಿದ್ದ.

Also Read  ಮೇಯಲು ಬಿಟ್ಟಿದ್ದ ದನ ಕರುಗಳ ಕಳವು - ಪ್ರಕರಣ ದಾಖಲು


ಇದನ್ನೆಲ್ಲ ನಂಬಿದ ಮಹಿಳೆ ತನ್ನಲ್ಲಿದ್ದ 6 ಗ್ರಾಂ. ತೂಕದ ಚಿನ್ನದ ಸರವನ್ನು ಕೊಡಲು ಕೈಯಲ್ಲಿ ಹಿಡಿದುಕೊಂಡು ಅಪರಿಚಿತನ ಬಳಿ ಬಂದಾಗ ಆತ ಸ್ವಲ್ಪ ಟೀ ಮಾಡಿಕೊಡಿ ಎಂದು ಕೇಳಿದ್ದ ಎನ್ನಲಾಗಿದೆ. ಈ ಸಂದರ್ಭ ಮಹಿಳೆ ತನ್ನ ಚಿನ್ನದ ಸರವನ್ನು ಟೇಬಲ್‌ ಮೇಲಿರಿಸಿ ಅಡುಗೆ ಕೋಣೆಗೆ ಟೀ ಮಾಡಲು ಹೋದಾಗ ಅಪರಿಚಿತ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಕಡಬ ಠಾಣಾ ಅ.ಕ್ರ 67/2023 ಕಲಂ: 454, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Also Read  20 ಟನ್ ಫಿಶ್ ಕಳವು ➤ಆರೋಪಿಯ ವಿರುದ್ದ ದೂರು ದಾಖಲು      

error: Content is protected !!
Scroll to Top