ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ 100ರೂ.ಇಳಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ, ಆ.02. ವಾಣಿಜ್ಯ ಬಳಕೆಯ ಸಿಲಿಂಡರ್ ಗಳ ಬೆಲೆಯನ್ನು ನವೀಕರಿಸಲಾಗಿದೆ. ಅಡುಗೆ ಅನಿಲ ಸಿಲಿಂಡರ್ ಗಳ ದರ ಇಳಿಕೆ‌ ಮಾಡಲಾಗಿದ್ದು, ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಸಲಾಗಿದೆ ಎನ್ನಲಾಗಿದೆ.

ದೇಶದ ರಾಜಧಾನಿ ನವದೆಹಲಿಯಲ್ಲಿ LPG ಸಿಲಿಂಡರ್ ಬೆಲೆ 1680 ರೂ.ಗೆ ಇಳಿದಿದ್ದು, ಜುಲೈನಲ್ಲಿ ಸಿಲಿಂಡರ್ ಬೆಲೆ ಏರಿಕೆಯಾದ ನಂತರ ಮೊದಲ ಬಾರಿಗೆ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ. ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 100 ರೂ. ಇಳಿಸಿದೆ. ಇದಕ್ಕೂ ಮೊದಲು 1780 ರೂ.ಇತ್ತು. ಇನ್ನು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Also Read  SEWA ಸಂಸ್ಥಾಪಕಿ, ಪದ್ಮಭೂಷಣ ಪುರಸ್ಕೃತೆ ಇಳಾ ಭಟ್ ನಿಧನ

error: Content is protected !!
Scroll to Top