ಯೂಟ್ಯೂಬ್ ಬಳಕೆದಾರರಿಗೆ ಗುಡ್ ನ್ಯೂಸ್ – ಹೊಸ ಯೂಟ್ಯೂಬ್ ಕ್ರಿಯೇಟ್ ಎಡಿಟಿಂಗ್ ಪರಿಚಯಿಸಲು ಸಜ್ಜು

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.02. ಪ್ರಸ್ತುತ ಕಿರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅನೇಕ ಬಳಕೆದಾರರು ಕಿರು ವಿಡಿಯೋ ಕ್ರಿಯೇಟ್ ಮಾಡಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ ಜನಪ್ರಿಯ ಇನ್ ಸ್ಟಾಗ್ರಾಂ ತಾಣವು ಇತ್ತೀಚೆಗೆ ತನ್ನ ಬಿಲ್ಟ್ ಇನ್ ರೀಲ್ ಎಡಿಟಿಂಗ್ ಸೌಲಭ್ಯ ನೀಡಿದೆ ಎನ್ನಲಾಗಿದೆ. ಅದೇ ಹಾದಿಯಲ್ಲಿ ಇದೀಗ ಯೂಟ್ಯೂಬ್ ಸಹ ಹೆಜ್ಜೆ ಹಾಕಿದ್ದು, ತನ್ನ ಬಳಕೆದಾರರಿಗೆ ಖುಷಿ ಸುದ್ದಿ ನೀಡಿದೆ ಎನ್ನಲಾಗಿದೆ.


ಅತೀ ದೊಡ್ಡ ವಿಡಿಯೋ ಪ್ಲಾಟ್ ಫಾರ್ಮ್ ಎನಿಸಿರುವ ಯೂಟ್ಯೂಬ್ ಇದೀಗ ಸ್ವಂತ ವಿಡಿಯೋ ಎಡಿಟಿಂಗ್ ಅಪ್ಲಿಕೇಶನ್ ಪರಿಚಯಿಸುವ ನಿಟ್ಟಿನಲ್ಲಿ ಸಾಗಿದೆ. ಅದುವೇ ಯೂಟ್ಯೂಬ್ ಕ್ರಿಯೇಟ್ ಆಗಿದ್ದು, ಈ ಎಡಿಟಿಂಗ್ ಅಪ್ಲಿಕೇಶನ್ ಅನ್ನು ಸದ್ಯ ಪರೀಕ್ಷಿಸುತ್ತಿದೆ. ಯೂಟ್ಯೂಬ್ ತನ್ನ ಕ್ರಿಯೇಟರ್ಸ್ ಗಳಿಗೆ ಎಡಿಟಿಂಗ್ ಸುಲಭ ಆಗಲಿ ಎಂದು ಯೂಟ್ಯೂಬ್ ಕ್ರಿಯೇಟ್ ಎಡಿಟಿಂಗ್ ಅಪ್ಲಿಕೇಶನ್ ಅನ್ನು ಪರಿಚಯಿಸಲು ಸಜ್ಜಾಗಿದೆ ಎಂದು ವರದಿ ತಿಳಿಸಿದೆ.

error: Content is protected !!
Scroll to Top