ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಸುಳ್ಯ, ಆ.02. ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ನಡೆದಿದೆ. ಬಾಲಕನನ್ನು ಬಿಳಿಯಾರಿನ ದಿ. ಮೂಸಾ ಎನ್ನುವವರ ಪುತ್ರ ಹನ್ಸೀಫ್ (17) ಎಂದು ಗುರುತಿಸಲಾಗಿದೆ.


ಬಾಲಕ ಮನೆಯಲ್ಲಿ ಒಬ್ಬನೆ ಇದ್ದು ರಾತ್ರಿ ವೇಳೆ ತನ್ನ ಅಜ್ಜಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದು, ಬಾಲಕನ ಮಾವ ನಸುಕಿನ ಜಾವ ಬಾಲಕನ ಮನೆಗೆ ಬಂದಾಗ ಹನ್ಸಿಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ.


ಇನ್ನು ಬಾಲಕ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ ನಿಂತಿಕಲ್ಲಿನ ಸಂಸ್ಥೆಯಲ್ಲಿ ಐಟಿಐಗೆ ದಾಖಲಾತಿ ಮಾಡಲಾಗಿತ್ತು. ತರಗತಿ ಆರಂಭವಾಗಿ ಆತನು ತರಗತಿಗೆ ತೆರಳಬೇಕಾಗಿತ್ತು. ತರಗತಿಗೆ ತೆರಳಲು ತನಗೆ ಮನಸ್ಸಿಲ್ಲ ಎಂದು ಮನೆಯಲ್ಲಿ ಹೇಳಿಕೊಂಡಿದ್ದ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ ಎಂದು ತಿಳಿದುಬಂದಿದೆ.

Also Read  ವಾಟ್ಸಾಪ್ ಬಳಕೆದಾರರೇ ಎಚ್ಚರ…! ➤ ಇನ್ಮುಂದೆ ವಾಟ್ಸಾಪ್ ಬಳಕೆಗೆ ನೀಡಬೇಕು ಶುಲ್ಕ..?

error: Content is protected !!
Scroll to Top