ದಕ್ಷಿಣ ಕನ್ನಡ ಜಿಲ್ಲೆಯ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 01. ರಾಜ್ಯ ಸರಕಾರವು 211 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರದಂದು ಆದೇಶ ಹೊರಡಿಸಿದೆ.

ಈ ಪೈಕಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೂರ್ವ (ಕದ್ರಿ) ಠಾಣೆಯ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ, ಬಂಟ್ವಾಳದ ವಿವೇಕಾನಂದ ಅವರನ್ನು ರಾಜ್ಯ ಗುಪ್ತ ವಾರ್ತೆಗೆ, ಮಂಗಳೂರು ಸೆನ್ ಠಾಣೆಯ ಸವಿತ್ರ ತೇಜ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಮೂಡುಬಿದಿರೆ ನಿರಂಜನ್ ಕುಮಾರ್‌ ರನ್ನು ಬಜ್ಪೆಗೆ, ಸುಳ್ಯದ ನವೀನ್ ಚಂದ್ರ ಜೋಗಿ ಅವರನ್ನು ಉಡುಪಿ ಸೆನ್ ಠಾಣೆಗೆ, ಕೊಣಾಜೆಯ ಪ್ರಕಾಶ್ ದೇವಾಡಿಗ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಠಾಣೆಗೆ, ಬಂದರ್‌ನ ರಾಘವೇಂದ್ರ ಬೈಂದೂರ್ ಅವರನ್ನು ಕದ್ರಿಗೆ, ಉರ್ವದ ಭಾರತಿ ಅವರನ್ನು ಬಂದರ್‌ ಗೆ, ಪಾಂಡೇಶ್ವರದ ಮಂಜುನಾಥ್ ಎಂ. ಅವರನ್ನು ಕೊಡಗಿನ ಶನಿವಾರ ಸಂತೆ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

Also Read  ಆರ್.ಸಿ ಹಾಗೂ ಇನ್ಶೂರೆನ್ಸ್ ದಾಖಲೆಪತ್ರದಲ್ಲಿ ತೊಂದರೆ ಹಿನ್ನೆಲೆ ➤‌ ಅಪಘಾತಕ್ಕೀಡಾಗಿದ್ದ ಕಾರನ್ನು ಪರಿಚಯಸ್ಥರ ಮನೆಸಮೀಪ ನಿಲ್ಲಿಸಿಹೋದ ಮಾಲಕ- ಆತಂಕಗೊಂಡ ಜನತೆ

error: Content is protected !!
Scroll to Top