ಮಾಣಿ : ಕೋಕ್ ಸಾಗಾಟದ ಲಾರಿ ಪಲ್ಟಿ – ಕಳಪೆ ಗುಣಮಟ್ಟದ ತಾತ್ಕಾಲಿಕ ರಸ್ತೆಯಿಂದ ಹೆಚ್ಚುತ್ತಿರುವ ಅಪಘಾತಗಳು

(ನ್ಯೂಸ್ ಕಡಬ) newskadaba.com ಮಾಣಿ, ಆ. 01. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಬೈಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸರ್ವಿಸ್ ರಸ್ತೆ ಹಳೀರ ಬಳಿ ಮಂಗಳೂರಿನಿಂದ ಹಾಸನಕ್ಕೆ ಕೋಕ್ ಸಾಗಿಸುತ್ತಿದ್ದ ಲಾರಿಯೊಂದು ಮಂಗಳವಾರ ಬೆಳಗಿನ ಜಾವ ರಸ್ತೆ ಬದಿಯ ತೋಟಕ್ಕೆ ಪಲ್ಟಿ ಹೊಡೆದ ಘಟನೆ ವರದಿಯಾಗಿದೆ.


ಘಟನೆಯಿಂದ ಡ್ರೈವರ್ ಮತ್ತು ಕ್ಲೀನರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಫ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಿಸುವ ಕಡೆಗಳಲ್ಲಿ ತೀರಾ ಕಳಪೆ ಗುಣಮಟ್ಟದ ಮತ್ತು ಅಪಾಯಕಾರಿಯಾದ ತಾತ್ಕಾಲಿಕ ರಸ್ತೆಗಳನ್ನು ಗುತ್ತಿಗೆದಾರರು ನಿರ್ಮಿಸಿಕೊಡುವುದರಿಂದ ಅಪಘಾತಗಳು ಹೆಚ್ಚುತ್ತಲೇ ಇದೆ. ಇಕ್ಕಟ್ಟಾದ ಏಕಮುಖ ಸಂಚಾರ ನಡೆಸಲು ಅಷ್ಟೇ ಸ್ಥಳವಿರುವ ಈ ರಸ್ತೆಯಲ್ಲಿ ದ್ವಿಪಥ ಸಂಚಾರ ಮಾಡಬೇಕಾಗಿದ್ದು, ನಿಯಮ ಪಾಲಿಸದ ಗುತ್ತಿಗೆದಾರರಿಗೆ ಶಾಪ ಹಾಕುತ್ತಲೇ ವಾಹನ ಸವಾರರು ಈ ರಸ್ತೆಗಳಲ್ಲಿ ದಿನಂಪ್ರತಿ ಸಾಗುತ್ತಿದ್ದಾರೆ. ಅತೀ ವೇಗವೂ ಈ ಲಾರಿ ಪಲ್ಟಿ ಹೊಡೆಯಲು ಕಾರಣವೆನ್ನಲಾಗಿದೆ‌. ಕಳೆದ ವಾರ ಇದೇ ಪರಿಸರದಲ್ಲಿ ಟೈಲ್ಸ್ ಸಾಗಾಟದ ಲಾರಿ ಪಲ್ಟಿಯಾಗಿತ್ತು. ತೆರವು ವೇಳೆ ಗಂಟೆಗಟ್ಟಲೆ ರೋಡ್ ಬ್ಲಾಕ್ ಆಗುವುದು ದೊಡ್ಡ ಸಮಸ್ಯೆ ಮತ್ತು ತಲೆನೋವಾಗಿದೆ.

Also Read  ಹೊಸ್ಮಠ: ತಗ್ಗಿದ ನೀರಿನ ಪ್ರಮಾಣ ► ವಾರದ ನಂತರ ಸಂಚಾರ ಮುಕ್ತವಾದ 'ಮುಳುಗು ಸೇತುವೆ'

error: Content is protected !!
Scroll to Top