ಬೈಕ್ ಕೀ’ಗಾಗಿ ಜಗಳ- ಓರ್ವನ ಕೊಲೆಯಲ್ಲಿ ಅಂತ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 31. ಬೈಕ್ ಕೀಗೋಸ್ಕರ ಇಬ್ಬರ ನಡುವೆ ಜಗಳ ನಡೆದು, ಯುವಕನೊಬ್ಬನನ್ನ ಕೊಲೆ ಮಾಡಿರುವ ಘಟನೆ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬರೀ ಬೈಕ್ ಕೀ ವಿಚಾರಕ್ಕೆ ಶುರುವಾ ಜಗಳ ಓರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ.

ಕೊಲೆಯಾದವನನ್ನು ನೇಪಾಳ ಮೂಲದ 25 ವರ್ಷದ ತಿಲಕ್ ಚಂದ್ ಎಂದು ಗುರುತಿಸಲಾಗಿದೆ. ಮಂಡ್ಯ ಮೂಲದ ಸಿದ್ದರಾಜು ಎಂಬಾತ ಕೊಲೆ ಮಾಡಿ ಗಿರಿನಗರ ಠಾಣೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಗಿರಿನಗರ ಠಾಣಾ ವ್ಯಾಪ್ತಿಯ ಸುಧಾನಗರದ ಕೋಳಿ ಅಂಗಡಿಯೊಂದರಲ್ಲಿ ಒಟ್ಟು ಆರು ಜನ ಕೆಲಸಕ್ಕಿದ್ದು, ಎಲ್ಲರಿಗೂ ಉಳಿದುಕೊಳ್ಳಲು ಒಂದೇ ರೂಮ್ ಕೊಟ್ಟಿದ್ದ ಓನರ್, ಜೊತೆಗೆ ಓಡಾಡೋಕೆ ಅಂತಾ ಒಂದು ಬೈಕ್ ಕೂಡಾ ಕೊಟ್ಟಿದ್ದರು.‌

ಬೈಕ್ ವಿಚಾರವಾಗಿ ಇವರೆಲ್ಲರ ನಡುವೆ ಆಗಾಗ ಜಗಳ ಆಗುತ್ತಿತ್ತು. ಹಾಗೆಯೇ ನಿನ್ನೆ ರಾತ್ರಿ ಬಾರ್ ಗೆ ತೆರಳಿದ್ದ ಸಿದ್ದರಾಜು ಮತ್ತು ತಿಲಕ್ ಕುಡಿದು, ಸುಮಾರು ಹನ್ನೊಂದು ಗಂಟೆಯ ವೇಳೆಗೆ ರೂಮ್ ಗೆ ಬಂದಿದ್ದರು. ಬಳಿಕ ಊಟ ತರೋಕೆ ಹೋಗುತ್ತೇನೆ ಬೈಕ್ ಕೀ ಕೇಳಿದ್ದಕ್ಕೆ ತಿಲಕ್, ನಿಂಗ್ಯಾಕೆ ಕೊಡ್ಬೇಕು ಕೀ ಕೊಡಲ್ಲ ಅಂತಾ ವಾದ ಮಾಡಿದ್ದಾನೆ. ರೂಮ್ ನಲ್ಲಿದ್ದವರು ಜಗಳ ಬಿಡಿಸೋಕೆ ಯತ್ನಿಸಿದರೂ ಇಬ್ಬರ ಮಧ್ಯೆ ಜಗಳ ಜೋರಾಗಿ, ರೂಮ್ ನಲ್ಲಿದ್ದ ಚಾಕು ಕೈಗೆತ್ತುಕೊಂಡಿದ್ದ ಸಿದ್ದರಾಜು, ತಿಲಕ್ನ ಎದೆಭಾಗಗಳಿಗೆ ಇರಿದಿದ್ದಾನೆ. ಅಲ್ಲದೇ ಚಾಕು ಇರಿದ ಭಾಗಕ್ಕೆ ಅರಿಶಿಣ ಹಾಕಿ ಬ್ಲೀಡಿಂಗ್ ಕಮ್ಮಿ ಮಾಡಿ ಆಸ್ಪತ್ರೆಗೆ ಸಾಗಿಸೋಕೆ ಆರೋಪಿ ಪ್ರಯತ್ನಿಸಿದ್ದ. ಆದರೆ ಅಷ್ಟರಲ್ಲೇ ತಿಲಕ್ ಕೊನೆಯುಸಿರೆಳೆದಿದ್ದ. ನಂತರ ಭಯಭೀತನಾದ ಆರೋಪಿ ಸಿದ್ದರಾಜು ಮಧ್ಯರಾತ್ರಿ ಗಿರಿನಗರ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ‌.

Also Read  ಉಳಾಯಿಬೆಟ್ಟು: ಎಂಟರ ಬಾಲೆಯ ಅತ್ಯಾಚಾರವೆಸಗಿ ಕೊಲೆ ಪ್ರಕರಣ..! ➤ ನಾಲ್ವರು ಆರೋಪಿಗಳ ಬಂಧನ

error: Content is protected !!
Scroll to Top