ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿನ ದಾಳಿ- ರೈಲ್ವೇ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಸಹಿತ 4 ಮಂದಿ ಬಲಿ

(ನ್ಯೂಸ್ ಕಡಬ) newskadaba.com ಮುಂಬೈ, ಜು. 31. ಜೈಪುರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಮುಂಬೈ ಸೆಂಟ್ರಲ್ ಎಕ್ಸ್‌ ಪ್ರೆಸ್ ರೈಲಿನಲ್ಲಿ ಗುಂಡಿನ ದಾಳಿ ನಡೆದು ನಾಲ್ವರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಫಾಲ್ಗರ್ ಬಳಿ ಸೋಮವಾರ ಮುಂಜಾನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೈಪುರ-ಮುಂಬೈ ರೈಲಿನಲ್ಲಿ ಆರ್‌ಪಿಎಫ್ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ರೈಲಿನಲ್ಲಿದ್ದ ಸಹಾಯಕ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್ ಸೇರಿದಂತೆ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಆರೋಪಿ, ಆರ್‌ಪಿಎಫ್ ಕಾನ್ಸ್‌ ಟೇಬಲ್ ಚೇತನ್ ಸಿಂಗ್ ಎಂಬಾತ ತನ್ನ ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಮತ್ತೊಬ್ಬ ಆರ್‌ ಪಿಎಫ್ ಎಎಸ್ ಐ ಮತ್ತು ಜೈಪುರದಿಂದ ಮುಂಬೈಗೆ ತೆರಳುತ್ತಿದ್ದ ರೈಲಿನ ಮೂವರು ಪ್ರಯಾಣಿಕರಿಗೆ ಗುಂಡಿಕ್ಕಿದ್ದಾನೆ. ಬಳಿಕ ಆರೋಪಿ ರೈಲಿನಿಂದ ಜಿಗಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಮುಂಬೈ ರೈಲ್ವೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು ಆತನ ಬಳಿಯಿದ್ದ ಬಂದೂಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Also Read  ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

error: Content is protected !!
Scroll to Top