ಸಂಚಾರಿ ನಿಯಮ ಉಲ್ಲಂಘನೆ 222 ಮಂದಿ ಡ್ರೈವಿಂಗ್ ಲೈಸೆನ್ಸ್ ರದ್ದು

(ನ್ಯೂಸ್ ಕಡಬ)newskadaba.com ಮಂಗಳೂರು, ಜು.29. ಸಂಚಾರಿ ನಿಯಮಗಳನ್ನು ಪಾಲಿಸದ ವಾಹನ ಚಾಲಕರಿಗೆ ತಿರುಗೇಟು ನೀಡಲು ಮುಂದಾಗಿದ್ದು, ದಂಡದ ಜೊತೆಗ ಇದೀಗ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಮುಂದಾಗಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಈಗಾಗಲೇ 222 ಮಂದಿ ವಾಹನ ಚಾಲಕರ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಆರ್ ಟಿಓಗೆ ಶಿಫಾರಸ್ಸು ಮಾಡಿದ್ದಾರೆ.


ಸಂಚಾರಿ ನಿಯಮ ಪಾಲಿಸದೇ ಎಸ್ಕೇಪ್ ಆಗುತ್ತಿದ್ದವರಿಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 14 ದಿನದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿರುವ ಹಾಗೂ ಸಂಚಾರ ನಿಯಮ ಪಾಲನೆ ಮಾಡದೇ ಇರುವ ವಾಹನ ಚಾಲಕರ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಶಿಫಾರಸು ಮಾಡಿದ್ದಾರೆ.

Also Read  ಉಳ್ಳಾಲ: ಸೆಕ್ಯೂರಿಟಿ ಗಾರ್ಡ್ ಮೃತದೇಹ ಚರಂಡಿಯಲ್ಲಿ ಪತ್ತೆ 

ಅದರಲ್ಲಿ ಅತೀವೇಗ ಮತ್ತು ನಿರ್ಲಕ್ಷ್ಯದ ಚಾಲನೆ – 113
ಡ್ರಿಂಕ್ ಆಂಡ್ ಡ್ರೈವ್ – 1
ಸರಕು ಸಾಗಾಟ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಪ್ರಕರಣಗಳು -16
ಮೊಬೈಲ್ ಫೋನ್ ಬಳಕೆ – 4
ಸಿಗ್ನಲ್ ಜಂಪಿಂಗ್ -5
ವಾಣಿಜ್ಯ ವಾಹನದಲ್ಲಿ ಪ್ರಯಾಣಿಕರ ಸಾಗಾಟ – 4
ಟ್ರಿಪಲ್ ರೈಡಿಂಗ್ ಪ್ರಕರಣ -3
ಹೆಲ್ಮೆಟ್ ಧರಿಸದೆ ಸಂಚಾರ -59
ಸೀಟ್ ಬೆಲ್ಟ್ ಹಾಕದೆ ಚಾಲನೆ -17

error: Content is protected !!
Scroll to Top