ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿಯ ಗರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 29. “ನನ್ನ ಜೀವನ-ನನ್ನ ಸ್ವಚ್ಚ ನಗರ” ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿರುವ ಮಂಗಳೂರು ಮಹಾನಗರ ಪಾಲಿಕೆಗೆ ಪ್ರಶಸ್ತಿ ಲಭಿಸಿದೆ.  ]

ಜು.27ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವರಾದ ರಹೀಂ ಖಾನ್ ಅವರು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ಆಡಳಿತ) ರವಿಕುಮಾರ್ ಅವರಿಗೆ ಪ್ರಶಸ್ತಿ ನೀಡಿದರು. ಕೇಂದ್ರ ಸರ್ಕಾರದ ಮೇರಿ ಲೈಫ್ ಮೇರಾ ಸ್ಪಚ್ಛಾ ಶೆಹರ್ (Meri Life Mera Swachha Shehar) ಅಭಿಯಾನದಡಿ “ನನ್ನ ಜೀವನ, ನನ್ನ ಸ್ವಚ್ಚ ನಗರ” ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿತ್ತು. ಪರಿಸರ ಅಭಿಯಂತರ ದಯಾನಂದ ಪೂಜಾರಿ ಇದ್ದರು.

Also Read  ಕೋಡಿಂಬಾಳದ ಮೂರಾಜೆ ಕೊಪ್ಪ ಶಾಲೆಯ ಛಾವಣಿ ಬಿರುಕು ► ಆತಂಕದಲ್ಲಿ ವಿದ್ಯಾರ್ಥಿಗಳು

error: Content is protected !!
Scroll to Top