ಕೆಮ್ಮಾರ ಸರಕಾರಿ ಶಾಲೆಗೆ ಧ್ವನಿವರ್ಧಕ ಸೆಟ್ ಕೊಡುಗೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜು. 28. ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಅತ್ಯವಶ್ಯಕವಾದ ಧ್ವನಿವರ್ಧಕ ಸೆಟ್‌ಗಳನ್ನು ಉದ್ಯಮಿ, ಸಮಾಜ ಸೇವಕರಾದ ಬಡ್ಡಮೆ ರಶೀದ್ ಹಾಜಿಯವರು ಕೊಡುಗೆಯಾಗಿ ನೀಡಿದರು.

ಕೆಮ್ಮಾರ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರಾಗಿರುವ ರಶೀದ್ ಹಾಜಿ ಬಡ್ಡಮೆ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜದ ಒಳಿತಿಗಾಗಿ ಸದಾ ಸೇವೆಗೈಯುತ್ತಿದ್ದಾರೆ. ಕೆಮ್ಮಾರ ಸರಕಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಶ್ರೀ ಎಮ್ ರವರು ಧ್ವನಿವರ್ಧಕ ಸೆಟ್‌ಗಳನ್ನು ಸ್ವೀಕರಿಸಿದರು. ನಮ್ಮ ಶಾಲೆಗೆ ಅತ್ಯವಶ್ಯಕವಾದ ಧ್ವನಿವರ್ಧಕ ಸೆಟ್ ಗಳನ್ನು ನೀಡಿದ ರಶೀದ್ ಹಾಜಿ ಬಡ್ಡಮೆಯವರನ್ನು ಶ್ಲಾಘಿಸಿದರು ಮತ್ತು ಅವರ ಕೊಡುಗೆಗೆ ಶಿಕ್ಷಕ ರಕ್ಷಕರ ಮತ್ತು ಶಾಲಾಭಿವೃಧ್ದಿ ಸಮಿತಿಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

Also Read  ಕುಂದಾಪುರ : ಮನೆ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಪ್ರಕರಣ..!! ➤  ಅಂತರಾಜ್ಯ ಕಳ್ಳರಿಬ್ಬರ ಬಂಧನ

error: Content is protected !!
Scroll to Top