(ನ್ಯೂಸ್ ಕಡಬ)newskadaba.com ಪಡುಬಿದ್ರಿ, ಜು.28. ಶಾಲೆಯ ಕಾವಲುಗಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ನವೀನ್ ಬಂಗೇರಾ (57) ಎಂದು ಗುರುತಿಸಲಾಗಿದೆ.
ಶಾಲೆಯಿಂದ ನೂರು ಮೀಟರ್ ದೂರದ ಯಶೋಧ ಎಂಬವರ ವಾಸದ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪಡುಬಿದ್ರಿ ಪೊಲೀಸರು ಹುಡುಕಾಡಿದಾಗ ನವೀನ್ ಮೃತದೇಹ ಪತ್ತೆಯಾಯಿತು ಎಂದು ತಿಳಿದುಬಂದಿದೆ. ಮನೆಯವರು ಆರು ಮೂವತ್ತರ ಸುಮಾರಿಗೆ ಮನೆಯಿಂದ ಹೊರ ಬಂದಾಗ ಬಾವಿಕಟ್ಟೆಯಲ್ಲಿ ಪರ್ಸ್, ನೂರರ, ಐವತ್ತರ ಮತ್ತು 500ರ ನೋಟ್ ಗಳು ಚೆಲ್ಲಿತ್ತು. ಕೆಲವು ನೋಟ್ ಹರಿದು ಎಸೆಯಲಾಗಿತ್ತು ಎನ್ನಲಾಗಿದೆ.
