ಪೊಲೀಸರು ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ಕಮಿಷನರ್ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 28. ಇನ್ನುಮುಂದೆ ಪೊಲೀಸ್ ಸಿಬ್ಬಂದಿಗೆ ಉತ್ತೇಜನ ನೀಡಲು ಬಾಡಿ ವೋರ್ನ್ ಕ್ಯಾಮೆರಾ ಧರಿಸಿದ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ. ದಯಾನಂದ್, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕೂಡ ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ಆದೇಶ ಹೊರಡಿಸಿದ್ದಾರೆ.


‘ಕಮಿಷನರ್ ಲಾ ಆಂಡ್ ಆರ್ಡರ್’ ಪೊಲೀಸರು ಕೂಡಾ ಈ ಬಾಡಿ ವೋರ್ನ್ ಕ್ಯಾಮೆರಾ ಧರಿಸಲು ಆದೇಶಿಸಲಾಗಿದ್ದು, ಹೊಯ್ಸಳ ಎಎಸ್‌ಐಗಳು ಬಾಡಿ ವೋರ್ನ್ ಕ್ಯಾಮೆರಾ ಧರಿಸಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಗಲಭೆ ಹಾಗೂ ಪ್ರತಿಭಟನೆಯ ವೇಳೆ ಇನ್ಸ್ ಪೆಕ್ಟರ್ ಕೂಡಾ ಕ್ಯಾಮೆರಾ ಧರಿಸಲು ಆದೇಶಿಲಾಗಿದೆ.

Also Read  ಕನಕಪುರ ವಿಧಾನಸಭಾ ಕ್ಷೇತ್ರ ➤ 9000 ಮತಗಳ ಅಂತರದಿಂದ ಡಿ.ಕೆ ಶಿವಕುಮಾರ್ ಮುನ್ನಡೆ

ಕೆಳಹಂತದ ಸಿಬ್ಬಂದಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹೊಸ ಪ್ರಯತ್ನ ಎಂದು ಆದೇಶ ಹೊರಡಿಸಲಿರುವ ಮುಖ್ಯ ಉದ್ದೇಶ ಎಂದು ಹೇಳಲಾಗಿದೆ. ಕಮಿಷನರ್ ಬಿ. ದಯಾನಂದ್ ಅವರು ತಾವೇ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರುವ ಫೋಟೋವನ್ನು ರಿಲೀಸ್ ಮಾಡಿದ್ದಾರೆ.

error: Content is protected !!
Scroll to Top