ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ – ಆರೋಪಿಯ ಮೊಬೈಲ್ ವಶ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 28. ಮಣಿಪುರದಲ್ಲಿ ಮಹಿಳೆಯ ನಗ್ನ ಮೆರವಣಿಗೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ಇದೀಗ ಘಟನೆಯ ವಿಡಿಯೋ ರೆಕಾರ್ಡ್ ಮಾಡಿದ ವ್ಯಕ್ತಿಯನ್ನೂ ಬಂಧಿಸಿ ಆತನ ಮೊಬೈಲ್ ಫೋನ್ ನ್ನು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.


ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ದೌರ್ಜನ್ಯ ಎಸಗಿರುವ ಪ್ರಕರಣವನ್ನು ಕೇಂದ್ರ ಸರ್ಕಾರ ಕೇಂದ್ರ ಗುಪ್ತಚರ ಸಂಸ್ಥೆಗೆ ತನಿಖೆಗೆ ವಹಿಸಲಿದೆ ಎಂದೂ ವರದಿಯಾಗಿದೆ.

Also Read  ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ ➤ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ

ಇನ್ನು ಮೇ. 4 ರಂದು ಮಣಿಪುರದಲ್ಲಿ ಎರಡು ಬಣಗಳ ನಡುವೆ ಗಲಭೆ ನಡೆದ ನಂತರ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ವಿಡಿಯೋ ವೈರಲ್ ಆದ ನಂತರ ದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದೆ.

error: Content is protected !!
Scroll to Top