ಕಡಬ: ಉಪ ವಲಯ ಅರಣ್ಯಾಧಿಕಾರಿ ಸುಭಾಷ್ ಬಿ. ನಿಧನ

(ನ್ಯೂಸ್ ಕಡಬ)newskadaba.com ಕಡಬ, ಜು.28. ಕಡಬ ತಾಲೂಕಿನ ನೆಟ್ಟಣದ ಕೇಂದ್ರೀಯ ಮರಗಳ ಸಂಗ್ರಹಾಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿದ್ದ ಮೂಲತಃ ಕಾಸರಗೋಡು ಸಮೀಪದ ಹೊಸದುರ್ಗ ನಿವಾಸಿ ರಾಮನಾಥ ಅರಳೀಕಟ್ಟೆ ಅವರ ಪುತ್ರ ಸುಭಾಷ್ ಬಿ. (55) ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಜು.28ರಂದು ನಿಧನ ಹೊಂದಿದರು ಎಂದು ವರದಿಯಾಗಿದೆ.

ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ. ಸುಭಾಷ್ ಅವರು 1990ರಲ್ಲಿ ಬೆಳ್ತಂಗಡಿಯಲ್ಲಿ ಅರಣ್ಯ ವೀಕ್ಷಕರಾಗಿ ಇಲಾಖಾ ಸೇವೆಗೆ ಸೇರಿದ್ದರು. ಬೆಳ್ತಂಗಡಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ಬಳಿಕ 2021ರಲ್ಲಿ ಉಪ ವಲಯ ಅರಣ್ಯಾಧಿಕಾರಿಯಾಗಿ ನೆಟ್ಟದ ಕೇಂದ್ರೀಯ ಮರ ಸಂಗ್ರಹಾಲಯಕ್ಕೆ ನೇಮಕಗೊಂಡು ಕಳೆದ ಎರಡೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

Also Read  ಕೇಂದ್ರ ಸಚಿವ ಸದಾನಂದ ಗೌಡ ಪ್ರವಾಸ

error: Content is protected !!
Scroll to Top