ರಾಜ್ಯದ ಜನತೆಗೆ ಗುಡ್ ನ್ಯೂಸ್..! – ಗೃಹ ಜ್ಯೋತಿ, ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.28. ರಾಜ್ಯದ ಜನರು ಬಹು ನಿರೀಕ್ಷೆಯಿಂದ ನೋಡುತ್ತಿರುವಂತ ಗೃಹ ಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 5ರಂದು ಗೃಹ ಜ್ಯೋತಿ ಹಾಗೂ ಆಗಸ್ಟ್ 17ರಂದು ಗೃಹಲಕ್ಷ್ಮಿ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.

ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ಜುಲೈ.18ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡ ಗೃಹ ಜ್ಯೋತಿ ಹಾಗೂ ಜುಲೈ.21ರಿಂದ ನೋಂದಣಿ ಆರಂಭಗೊಂಡು ಗೃಹ ಲಕ್ಷ್ಮಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆಯನ್ನು ಆಗಸ್ಟ್ 5 ಹಾಗೂ 17ರಂದು ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದೆ. ಆಗಸ್ಟ್ 5ರಂದು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ಫಲಾನುಭವಿಗಳಿಗೆ ಒದಗಿಸಿ ಕೊಡುವಂತ ಸೌಲಭ್ಯಕ್ಕೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ರಾಜ್ಯದ ಕುಟುಂಬದ ಯಜಮಾನಿ ಮಹಿಳೆಯರು ನಿರೀಕ್ಷೆಯಿಂದ ಕಾಯುತ್ತಿರುವಂತ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000 ಪ್ರತಿ ತಿಂಗಳು ಖಾತೆಗೆ ಜಮಾ ಆಗುವುದಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಬಳಿಕ ಯಜಮಾನಿ ಮಹಿಳೆಯರ ಖಾತೆಗೆ 2000 ಜಮಾ ಆಗಲಿದೆ ಎನ್ನಲಾಗಿದೆ.

Also Read  ರಾಜ್ಯದಲ್ಲಿ ರದ್ದಾಗುತ್ತಾ ತಾಲೂಕು ಪಂಚಾಯತ್..? ➤ ಸರಕಾರದಿಂದ ಚಿಂತನೆ

 

 

error: Content is protected !!
Scroll to Top