ಸ್ಟಾರ್(*) ಚಿಹ್ನೆ ಹೊಂದಿರುವ ನೋಟುಗಳಿಗೆ ಮಾನ್ಯತೆಯಿದೆ, ಗೊಂದಲ ಬೇಡ – ಆರ್.ಬಿಐ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 28. ಸ್ಟಾರ್‌(*) ಚಿಹ್ನೆ ಇರುವ ನೋಟುಗಳು ಇತರೆ ನೋಟುಗಳಂತೆಯೇ ಮಾನ್ಯವಾಗಿರುತ್ತದೆ, ಹಾಗಾಗಿ ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸ್ಪಷ್ಟನೆ ನೀಡಿದೆ.

ಕರೆನ್ಸಿ ನೋಟುಗಳು ಸ್ಟಾರ್‌ ಚಿಹ್ನೆಯನ್ನು ಹೊಂದಿವೆ ಎಂಬುದನ್ನು ಆರ್‌ಬಿಐ ಈಗಾಗಲೇ ಸ್ಪಷ್ಟಪಡಿಸಿದ್ದು, ಈ ಚಿಹ್ನೆ ಇರುವ ಕರೆನ್ಸಿ ನೋಟುಗಳು ಇತರ ಕರೆನ್ಸಿ ನೋಟುಗಳಂತೆ ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಿದೆ.

ಇನ್ನು ಈ ಚಿಹ್ನೆಯಿರುವಂಥ ನೋಟುಗಳು ಮಾನ್ಯವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾದ ಹಿನ್ನೆಲೆ ಆರ್ಬಿಐ ಸ್ಪಷ್ಟನೆ ನೀಡಿದೆ.

Also Read  ಮೋದಿ ಸರ್ಕಾರದ ಮಹತ್ವದ ಹೆಜ್ಜೆ; ದೇಶದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ರೈಲಿನ ಸಂಚಾರಕ್ಕೆ ಸಜ್ಜು

error: Content is protected !!
Scroll to Top