(ನ್ಯೂಸ್ ಕಡಬ) newskadaba.com ಸಿಕ್ಕಿಂ, ಜು. 27. ಸಿಕ್ಕಿಂ ರಾಜ್ಯದಲ್ಲಿ ಸರಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ನೀಡಲಾಗುವುದು ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಹೇಳಿದ್ದಾರೆ.
ನಾಗರೀಕ ಸೇವಾ ಅಧಿಕಾರಿಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ನೀಡಲಾಗುವುದು, ಜೊತೆಗೆ ಪುರುಷರಿಗೂ ಒಂದು ತಿಂಗಳು ಪಿತೃತ್ವ ರಜೆ ನೀಡಲಾಗುವುದು ಎಂದರು. ಈ ಯೋಜನೆಯಿಂದ ಸರಕಾರಿ ನೌಕರರು ತಮ್ಮ ಮಕ್ಕಳು ಹಾಗೂ ಕುಟುಂಬದ ಬಗ್ಗೆ ಕಾಳಜಿ ವಹಿಸಲು ಸಹಕಾರಿಯಾಗಲಿದೆ. ಯೋಜನೆಯಲ್ಲಿ ಕೆಲವು ಸೇವಾ ನಿಯಮಗಳನ್ನು ಬದಲಾವಣೆ ಮಾಡಿ ಶೀಘ್ರದಲ್ಲೇ ವಿವರ ಪ್ರಕಟಿಸಲಾಗುವುದು ಎಂದರು.