ಇಂದು ಸಂಜೆ 5.17 ರಿಂದ ಅಪರೂಪದ ಚಂದ್ರಗ್ರಹಣ ► ಸುಮಾರು 150 ವರ್ಷಗಳ ಬಳಿಕ ಉಂಟಾಗುವ ‘ಸೂಪರ್ ಬ್ಲೂಬ್ಲಡ್ ಮೂನ್’

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.31. ಸುಮಾರು 150 ವರ್ಷಗಳ ಬಳಿಕ ಅಪರೂಪದ ‘ಸೂಪರ್ ಬ್ಲೂ ಬ್ಲಡ್ ಮೂನ್’ ಚಂದ್ರಗ್ರಹಣವು ಬುಧವಾರ 3 ಗಂಟೆ 34 ನಿಮಿಷಗಳ ಕಾಲ ರಾಜ್ಯದಲ್ಲಿ ಗೋಚರಿಸಲಿದ್ದು, ಸೌರಮಂಡಲದ ಅಪರೂಪದ ಪ್ರಕ್ರಿಯೆಯನ್ನು ಸಾರ್ವಜನಿಕರು ಬರಿಗಣ್ಣಿನಲ್ಲಿ ವೀಕ್ಷಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸೆ. 5.17 ಕ್ಕೆ ಗ್ರಹಣ ಹಿಡಿಯಲಿದ್ದು, 8.41 ಕ್ಕೆ ಮುಕ್ತಾಯಗೊಳ್ಳಲಿದೆ. ಗ್ರಹಣದ ಮಧ್ಯಕಾಲ 7.19 ಕ್ಕೆ ಆಗಲಿದ್ದು, ಆಗ ಅಮವಾಸ್ಯೆಯ ಕತ್ತಲಿನಂತೆ ಭಾಸವಾಗಲಿದೆ. 1866 ರ ಮಾ. 31 ರಂದು ಇದೇ ರೀತಿಯ ಅಪರೂಪದ ಗ್ರಹಣವಾಗಿತ್ತು. ಅಮೆರಿಕಾದ ಅಲಾಸ್ಕಾ, ಹವಾಯಿ, ಕೆನಡಾ, ಭಾರತ ಉಪಖಂಡ, ಮಧ್ಯಪ್ರಾಚ್ಯ ಮತ್ತು ಪೂರ್ವ ಯುರೋಪ್ ರಾಷ್ಟ್ರಗಳಲ್ಲಿ ಗ್ರಹಣ ಕಾಣಿಸಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿ ಸಂಜೆ ವೇಳೆ ಸೂರ್ಯಾಸ್ತ ಮತ್ತು ಚಂದ್ರೋದಯ ಸಮಯದಲ್ಲಿ ಗ್ರಹಣವಾಗಲಿದ್ದು, ಆಕಾಶದಲ್ಲಿ ವಿಶೇಷ ಚಿತ್ತಾರವೇ ಕಾಣಲಿದೆ ಎನ್ನಲಾಗಿದೆ.

Also Read  'ಯಾವ ಬ್ಲಾಕ್‌ ಮೇಲ್‌ ನನ್ನ ಮುಂದೆ ನಡೆಯಲ್ಲ' - ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

error: Content is protected !!
Scroll to Top