ಪ್ರತೀಕ್ ನ ಸ್ಥಾನದಲ್ಲಿ ಅತೀಕ್ ಇದ್ರೆ ಮಾತ್ರವೇ ನಿಮ್ಮ ಹೋರಾಟ..?- ದಿನೇಶ್ ಗುಂಡೂರಾವ್ ಪ್ರಶ್ನೆ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 27. ಉಡುಪಿ ಪ್ರಕರಣದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಇಷ್ಟು ತಲೆ ಕೆಡಿಸಿಕೊಕೊಳ್ಳುತ್ತಿರುವ ನೀವು, ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಬಿಟ್ಟಾಗ ಎಲ್ಲಿದ್ದಿರೀ?” ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ಗುರುವಾರದಂದು ಟ್ವೀಟ್ ಮಾಡಿರುವ ಅವರು, ಪ್ರತೀಕ್ ಗೌಡ ಎಂಬ ಎಬಿವಿಪಿಯವನೊಬ್ಬ ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟಾಗ ಬೊಮ್ಮಾಯಿ ಸೇರಿದಂತೆ ಬಿಜೆಪಿ ಎಲ್ಲಾ ನಾಯಕರ ನವರಂದ್ರಗಳೂ ಬಂದ್ ಆಗಿತ್ತು. ಈಗ ಧರ್ಮರಕ್ಷಕರ ಮುಖವಾಡ ತೊಟ್ಟು ಅಖಾಡಕ್ಕಿಳಿದಿದ್ದಾರೆ‌. ಹಿಂದೂ ಯುವತಿಯರ ಅಶ್ಲೀಲ ವಿಡಿಯೋ ಹರಿಬಿಟ್ಟ ‘ಪ್ರತೀಕ್’ ನ ಸ್ಥಾನದಲ್ಲಿ ‘ಅತೀಕ್’ ಇದ್ದರೆ ಮಾತ್ರ ಇವರ ಹೋರಾಟವೇ?” ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗದುಕೊಂಡಿದ್ದಾರೆ.

Also Read  ಸಿಇಟಿ ಪ್ರವೇಶ ಪರೀಕ್ಷೆ ವೇಳಾಪಟ್ಟಿ ಪ್ರಕಟ

error: Content is protected !!
Scroll to Top