(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 27. ದಾವಣಗೇರಿ ಸಂಸದರಿಗೆ ಅಪರಿಚಿತ ಮಹಿಳೆಯೋರ್ವಳು ಮೊದಲು ಮೆಸೇಜ್ ಮಾಡಿ ಬಳಿಕ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬೆದರಿಕೆ ನೀಡಿದ್ದಾಳೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಸಂಸದರಿಗೆ ಕಳೆದ 20 ರಂದು ರಾತ್ರಿ 10.16ರ ವೇಳೆಗೆ ಅಪರಿಚಿತ ಮಹಿಳೆಯಿಂದ ಮೆಸೇಜ್ ಬಂದಿದ್ದು, ಸಂಸದರು ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ, ಆದರೆ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಬಂದಿದೆ. ಕರೆ ಸ್ವೀಕರಿಸಿ ಯಾರು..? ಏನು ಅಂತ ಕೇಳುತ್ತಿದ್ದಂತೆ ಹಿಂದಿಯಲ್ಲಿ ಮಾತನಾಡಿದ್ದು, ಬಳಿಕ ಮತ್ತೆ ರಾತ್ರಿ 10.24ಕ್ಕೆ ವಾಟ್ಸ್ ಆಪ್ ಆಡಿಯೋ ಕಾಲ್ ಮಾಡಿದು, ಕರೆಯನ್ನು ಕಟ್ ಮಾಡಿದ್ರು ಕೂಡಾ ಆಕೆ ಪದೇ ಪದೇ ಕರೆ ಮಾಡುತ್ತಿದ್ದಳು ಎನ್ನಲಾಗಿದೆ. ಬಳಿಕ 10.27ಕ್ಕೆ ಏಕಾಏಕಿ ಬೆತ್ತಲೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ವಿಡಿಯೋ ರೆಕಾರ್ಡ್ ನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ನೀಡಿದ್ದಾರೆ ಎಂದು ಸಂಸದರು ದೂರು ನೀಡಿದ್ದಾರೆ. ಇದೀಗ ಘಟನೆಯ ವಿಚಾರವಾಗಿ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ಪೋಲಿಸರು ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ.