ಚಿಕ್ಕಪ್ಪನನ್ನೇ ಮದುವೆಯಾದ ಮಗಳು- ಗ್ರಾಮಸ್ಥರಿಂದ ತೀವ್ರ ಆಕ್ರೋಶ

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಜು. 27. ಪ್ರೀತಿ ಮಾಡಲು ಜಾತಿ-ಧರ್ಮ ಮತ್ತು ವಯಸ್ಸಿನ ಅಂತರವಿಲ್ಲವೆಂದು ಭಾವಿಸಿ ಅನೇಕರು ಲವ್ ಮಾಡಿ ಮದುವೆಯಾಗುತ್ತಾರೆ. ಪ್ರೀತಿಗೆ ಕಣ್ಣಿಲ್ಲ ಆದರೆ ಪ್ರೀತಿ ಕುರುಡಲ್ಲ ಎಂಬ ಮಾತಿನಂತೆ ಇಲ್ಲೋರ್ವಳು ತನ್ನ ಚಿಕ್ಕಪ್ಪನನ್ನೇ ಪ್ರೀತಿಸಿ ಮದುವೆಯಾದ ವಿಚಿತ್ರ ಘಟನೆ ಉತ್ತರಪ್ರದೇಶದ ಜೌನ್‍ಪುರ ಜಿಲ್ಲೆಯ ತಾಜುದ್ದೀನ್‌ ಪುರ ಗ್ರಾಮದಲ್ಲಿ ನಡೆದಿದೆ.

ಶುಭಂ ಎನ್ನುವ ವ್ಯಕ್ತಿಯೊಬ್ಬ ತನ್ನ ಅಣ್ಣನ ಮಗಳನ್ನೇ ಮದುವೆಯಾಗಿದ್ದಾನೆ. ಈ ವಿವಾಹಕ್ಕೆ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಆದರೆ ಇಬ್ಬರೂ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದೆ. ಶುಭಂ ತನ್ನ ಸ್ವಂತ ಅಣ್ಣನ ಮಗಳಾದ ರಿಯಾಳನ್ನು ಮಡಿಯಾಹುನ್ ಕೊಟ್ವಾಲಿ ಪ್ರದೇಶದಲ್ಲಿರುವ ಹನುಮಾನ್ ಮಂದಿರದಲ್ಲಿ ಮದುವೆಯಾಗಿದ್ದಾನೆ. ಇವರಿಬ್ಬರು ಸಂಬಂಧದಲ್ಲಿ ತಂದೆ ಮಗಳು ಆಗಬೇಕು. ಹೀಗಾಗಿ ಆರಂಭದಲ್ಲಿ ಕುಟುಂಬವು ಇವರ ಸಂಬಂಧವನ್ನು ವಿರೋಧಿಸಿತ್ತು. ಆದರೆ ಅಂತಿಮವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Also Read  ಬಿದ್ದು ಸಿಕ್ಕಿದ 14 ಸಾವಿರ ರೂ ಹಣವನ್ನು ದೇವಸ್ಥಾನದ ಅರ್ಚಕರಿಗೊಪ್ಪಿಸಿದ ಪತ್ರಕರ್ತ

ಇದೀಗ ಈ ಜೋಡಿಯ ಮದುವೆಯ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇವರಿಬ್ಬರ ಸಂಬಂಧದ ಬಗ್ಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ನಾವಿಬ್ಬರೂ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ, ಹೀಗಾಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆಂದು ಶುಭಂ ಮತ್ತು ರಿಯಾ ಪೋಷಕರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಇದರಿಂದ ಮನೆಯವರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರಾದರೂ, ವಿಧಿಯಿಲ್ಲದೇ ಇವರ ಮದುವೆಗೆ ಒಪ್ಪಿಕೊಂಡಿದ್ದಾರೆ. ಆದರೆ ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Also Read  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ- ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ

error: Content is protected !!
Scroll to Top