‘ಕೆಎಸ್ಸಾರ್ಟಿಸಿ’ ಬಸ್ ಕೊಂಡೊಯ್ಯವವರಿಗೆ ಬಿಗ್ ಶಾಕ್ – ಕಿ.ಮೀ. ದರದಲ್ಲಿ ಹೆಚ್ಚಳ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 27. ಇನ್ನುಮುಂದೆ ಕೆಎಸ್ಸಾರ್ಟಿಸಿ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಕೊಂಡೊಯ್ಯುವವರಿಗೆ ದರವನ್ನು ಪರಿಷ್ಕರಿಸಿ, ದರ ಹೆಚ್ಚಿಸಿದ್ದು, ಈ ಮೂಲಕ ಬಿಗ್ ಶಾಕ್ ನೀಡಿದೆ. ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿರುವ ಕೆಎಸ್ಸಾರ್ಟಿಸಿ,  ಶಕ್ತಿ ಯೋಜನೆಯ ಬಳಿಕ ಸಾಮಾನ್ಯ ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸಲಾಗುವ ಬಸ್ ಗಳಿಗೆ ವಿಧಿಸಲಾಗುತ್ತಿರುವಂತಹ ದರ, ಕಿಲೋ ಮೀಟರ್ ಹಾಗೂ ಷರತ್ತುಗಳ ನಿಬಂಧನೆಯನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದೆ.

ಸಾರಿಗೆ ಬಸ್ ನ ಪರಿಷ್ಕೃತ ದರ

ಕರ್ನಾಟಕ ಸಾರಿಗೆ 55, 47, 49 ಆಸನಗಳ ಸಂಖ್ಯೆಗಳ ಬಸ್ ಗಳಿಗೆ 350 ಕನಿಷ್ಠ ಕಿಲೋಮೀಟರ್ ನಿಗದಿ ಪಡಿಸಲಾಗಿದೆ. ರಾಜ್ಯದೊಳಗೆ ರೂ. 47 ಅನ್ನು ಪ್ರತೀ ಕಿಲೋಮೀಟರ್ ಗೆ ವಾರದ ಎಲ್ಲಾ ದಿನ ನಿಗದಿ ಪಡಿಸಲಾಗಿದೆ. ಅಂತರರಾಜ್ಯ ಸಾಂದರ್ಭಿಕ ಒಪ್ಪಂದಕ್ಕೆ ರೂ.50 ಅನ್ನು ನಿಗದಿ ಪಡಿಸಲಾಗಿದೆ. ರಾಜಹಂಸ ಎಕ್ಸಿಕ್ಯೂಟಿವ್ 36 ಆಸನಗಳ ಬಸ್ಸಿಗೆ ದಿನಕ್ಕೆ 350 ಕಿಲೋಮೀಟರ್ ನಿಗದಿ ಪಡಿಸಿ, ರಾಜ್ಯದೊಳಗೆ ಪ್ರತಿ ಕಿಲೋಮೀಟರ್ ಗೆ ರೂ.48 ಹಾಗೂ ಅಂತರ್ರಾಜ್ಯಗಳಿಗೆ ರೂ. 53 ನಿಗದಿ ಪಡಿಸಿದೆ. ರಾಜಹಂಸ 39 ಆಸನದ ಬಸ್ಸುಗಳಿಗೆ ದಿನವೊಂದಕ್ಕೆ 350 ಕನಿಷ್ಠ ಕಿ.ಮೀ ಮಿತಿ ಹೇರಿದೆ. ಪ್ರತಿ ಕಿಲೋಮೀಟರ್ ಗೆ ರಾಜ್ಯದೊಳಗೆ ರೂ. 51, ರಾಜ್ಯದ ಹೊರಗೆ ರೂ. 55 ಅನ್ನು ನಿಗದಿ ಪಡಿಸಲಾಗಿದೆ.  ಇನ್ನೂ ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ. ಈ ಪರಿಷ್ಕೃತ ದರಗಳು ಆಗಸ್ಟ್ ಒಂದರಿಂದ ಜಾರಿಗೆ ಬರಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!

Join the Group

Join WhatsApp Group