14.12 ಸೆಕೆಂಡ್‌ಗಳಲ್ಲಿ ಪೇಟ ಕಟ್ಟಿ ಗಿನ್ನೆಸ್ ರೆಕಾರ್ಡ್ ಬರೆದ ಭಾರತೀಯ

(ನ್ಯೂಸ್ ಕಡಬ) newskadaba.com  ನವದೆಹಲಿ, ಜು. 26. ಪೇಟ ಭಾರತೀಯ ಪುರುಷರ ವೇಷಭೂಷಣದ ಪ್ರಮುಖ ಭಾಗ. ಸಾಮಾನ್ಯವಾಗಿ ಸಾಂಪ್ರದಾಯಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ದೇಶದ ಹೆಚ್ಚಿನ ಕಡೆಗಳಲ್ಲಿ ಈ ಪೇಟವನ್ನು ಧರಿಸಲಾಗುತ್ತದೆ. ಆದರೆ, ಪೇಟವನ್ನು ಕಟ್ಟೋದಿಕ್ಕೆ ಒಟ್ಟು ಎಷ್ಟು ಟೈಮ್ ಬೇಕೆಂಬುದು ಗೊತ್ತಿದೆಯೇ. ಇದಕ್ಕೆ ಸರಿಸಾಟಿಯೆಂಬಂತೆ ಆದಿತ್ಯ ಪಚೋಲಿ ಎಂಬವರು ಪೇಟವನ್ನು ಅತ್ಯಂತ ವೇಗವಾಗಿ ಕಟ್ಟುವ ಮೂಲಕ ವಿಶ್ವದಾಖಲೆಯನ್ನು ಬರೆದಿದ್ದಾರೆ.

ಆದಿತ್ಯ ಪಚೋಲಿ ಅವರು ಈ ಪೇಟ ಕಟ್ಟೋದಕ್ಕೆ ತೆಗೆದುಕೊಂಡ ಸಮಯ ಕೇಳಿದ್ರೆ ನೀವು ಶಾಕ್ ಆಗೋದಂತೂ ಗ್ಯಾರಂಟಿ. ಯಾಕೆ ಅಂದ್ರೆ ಕೇವಲ 14.12 ಸೆಕೆಂಡುಗಳಲ್ಲಿ ಪೇಟ ಕಟ್ಟುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಈ ಬಗ್ಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ ಎನ್ನಲಾಗಿದೆ.

Also Read  ನೌಕಾಪಡೆಯಿಂದ ಐತಿಹಾಸಿಕ ನಡೆ ➤ ಯುದ್ಧನೌಕೆಯಲ್ಲಿ ಮಹಿಳಾ ಅಧಿಕಾರಿಗಳ ನಿಯೋಜನೆ

error: Content is protected !!
Scroll to Top