ಮಣಿಪುರ ಹಿಂಸಾಚಾರದ ಕರಾಳ ಸತ್ಯ ಬಿಚ್ಚಿಟ್ಟ ಸಂತ್ರಸ್ತೆ

(ನ್ಯೂಸ್ ಕಡಬ) newskadaba.com  ಇಂಫಾಲ, ಜು. 26. ಮಣಿಪುರದ ರಾಜಧಾನಿಯಲ್ಲಿ ಮೇ ತಿಂಗಳಿನಲ್ಲಿ ಆರಂಭವಾದ ಹಿಂಸಾತ್ಮಕ ಕೃತ್ಯಗಳಿಂದ ಹಲವರು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಹೀಗೆ ತಪ್ಪಿಕೊಳ್ಳುವ ಉದ್ದೇಶದಿಂದ ಎಟಿಎಂಗೆ ತೆರಳಿದ್ದ 19 ವರ್ಷದ ಯುವತಿಯೋರ್ವಳನ್ನು ಹಲವು ಮಂದಿಯ ಗುಂಪೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಆಘಾತಕಾರಿ ಘಟನೆಯ ಮಾಹಿತಿಯನ್ನು ಹೊರಹಾಕಿದ ಯುವತಿ, ಜನಾಂಗೀಯ ಸಂಘರ್ಷದಿಂದ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯವನ್ನು ಟಿವಿಗೆ ನೀಡಿದ ಸಂದರ್ಶನವೊಂದದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.


ಯುವತಿಯ ಮಾಹಿತಿ ಪ್ರಕಾರ, ಬೆಟ್ಟ ಪ್ರದೇಶಕ್ಕೆ ಕರೆದೊಯ್ದು ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿದ್ದಾಳೆ. ಬಂದೂಕಿನ ತುದಿಯಿಂದ ಹೊಡೆದು ಅನ್ನ- ನೀರು ಕೂಡಾ ನೀಡದೇ ಚಿತ್ರಹಿಂಸೆ ನೀಡಲಾಗಿತ್ತು. ಬಳಿಕ ಮೇ. 15ರಂದು ಕಣಿವೆಯಲ್ಲಿದ್ದ ಉಗ್ರರ ಗುಂಪಿಗೆ ಹಸ್ತಾಂತರಿಸಲಾಯಿತು ಎಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾಳೆ.

Also Read  ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ - ಆರೋಪಿಯ ಮೊಬೈಲ್ ವಶ

ಬಿಳಿ ಬೊಲೆರೊದಲ್ಲಿ ಬಂದ ನಾಲ್ವರು ನನ್ನನ್ನು ಅಪಹರಿಸಿ, ಚಾಲಕನ ಹೊರತುಪಡಿಸಿ ಇತರ ಮೂವರು ಅತ್ಯಾಚಾರ ನಡೆಸಿದ್ದಾರೆ. ಏನೆಲ್ಲ ಚಿತ್ರಹಿಂಸೆ ನೀಡಬಹುದೋ ಅದೆಲ್ಲವನ್ನೂ ನೀಡಿದ್ದಾರೆ. ಇಡೀ ರಾತ್ರಿ ತಿನ್ನಲು ಅನ್ನ, ನೀರು ಏನೂ ಕೊಟ್ಟಿಲ್ಲ. ಬೆಳಿಗ್ಗೆ ಶೌಚಕ್ಕೆ ಹೋಗುವ ನೆಪದಲ್ಲಿ ಬಿಡಿಸುವಂತೆ ಕೇಳಿಕೊಂಡೆ. ಆ ಪೈಕಿ ಓರ್ವ ನನ್ನ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚಿದ. ಸುತ್ತಮುತ್ತ ಏನಾಗುತ್ತಿದೆ ಎನ್ನುವುದನ್ನು ಗಮನಿಸಿ, ಬಳಿಕ ಬೆಟ್ಟದ ಕೆಳಗೆ ಓಡಿ ತಪ್ಪಿಸಿಕೊಂಡಿರುವುದಾಗಿ ಹೇಳಿದ್ದಾಳೆ. ಬಳಿಕ ತರಕಾರಿ ರಾಶಿಯಲ್ಲಿ ಅಡಗಿ ಕುಳಿತು ಆಟೋ ರಿಕ್ಷಾವೊಂದರಲ್ಲಿ ತೆರಳಿ ತಪ್ಪಿಸಿಕೊಂಡೆ. ಬಳಿಕ ಕಂಗ್ಪೊಕ್ಪಿಗೆ ಆಗಮಿಸಿದ ನನ್ನನ್ನು ನೆರೆಯ ನಾಗಾಲ್ಯಾಂಡ್ ನ ಕೋಹಿಮಾ ಆಸ್ಪತ್ರೆಗೆ ತೆರಳುವಂತೆ ಸೂಚಿಸಲಾಯಿತು. ಜುಲೈ 21ರಂದು ದೂರು ನೀಡಲು ಸಾಧ್ಯವಾಯಿತು ಎಂದು ವಿವರಿಸಿದ್ದಾರೆ.

Also Read  ನಿಷೇಧಿತ ಖಲಿಸ್ತಾನ್ ಕಮಾಂಡೋ ಫೋರ್ಸ್‌ನ ಮೂವರು ಭಯೋತ್ಪಾದಕರು ಎನ್‌ಕೌಂಟರ್

error: Content is protected !!
Scroll to Top