(ನ್ಯೂಸ್ ಕಡಬ)newskadaba.com ಜು.26. ನಿಮ್ಮ ತ್ವಚೆಗೆ ಶ್ರೀಗಂಧದ ಎಣ್ಣೆಯನ್ನು ಹಚ್ಚುವುದರಿಂದ ಯಾವೆಲ್ಲಾ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ? ಶ್ರೀಗಂಧದಲ್ಲಿ ಹಲವು ರೀತಿಯ ಔಷಧಿ ಗುಣಗಳಿದ್ದು ವಿಶಿಷ್ಟ ಪರಿಮಳವನ್ನು ಬೀರುತ್ತದೆ. ಇದು ನಿಮ್ಮ ತ್ವಚೆಯನ್ನು ಕಾಂತಿಯುತವಾಗಿರುವ ಅತ್ಯುತ್ತಮ ನೈಸರ್ಗಿಕ ಎಣ್ಣೆಯಾಗಿದೆ. ಶ್ರೀಗಂಧದ ಎಣ್ಣೆಯನ್ನು ತ್ವಚೆಯ ಆರೈಕೆಗೆ ಬಳಸಿ. ಅಂದರೆ ಈ ಎಣ್ಣೆಯನ್ನು ನಿಮ್ಮ ಮುಖ, ಕೈ ಕಾಲುಗಳಿಗೆ ತೆಳುವಾಗಿ ಸವರಿಕೊಳ್ಳಿ.
ಮುಖದಲ್ಲಿ ಮೊಡವೆಗಳು ಹೆಚ್ಚಿದ್ದರೆ ಶ್ರೀಗಂಧದ ಎಣ್ಣೆಯನ್ನು ಹಾಕಿ. ಇದು ಉರಿಯುತದ ಗುಣಲಕ್ಷಣಗಳನ್ನು ಹೊಂದಿದೆ ಹಾಗಾಗಿ ಮೊಡವೆಗಳಿಗೆ ಚಿಕಿತ್ಸೆ ನೀಡುತ್ತದೆ. ಅದೇ ರೀತಿ ಶ್ರೀಗಂಧದ ಎಣ್ಣೆ ಟ್ಯಾನಿಂಗ್ ವಿರೋಧಿಯಾಗಿ ಕೆಲಸ ಮಾಡುತ್ತದೆ. ಚರ್ಮದ ಮೇಲಿರುವ ಟ್ಯಾನಿಂಗನ್ನು ತೆಗೆದುಹಾಕಿ, ನೈಸರ್ಗಿಕವಾಗಿ ಹೊಳಪನ್ನು ನಿಮ್ಮ ತ್ವಚೆಗೆ ಮರುಕಳಿಸುತ್ತದೆ. ಮುಖದ ಮೇಲೆ ಉಳಿದಿರುವ ಕಲೆಗಳನ್ನು ಇದು ದೂರ ಮಾಡುತ್ತದೆ. ಸುಕ್ಕು ಹಾಗೂ ನೆರಿಗೆಯ ಲಕ್ಷಣಗಳನ್ನು ತೆಗೆದು ಹಾಕುತ್ತದೆ. ಇದಕ್ಕಾಗಿ ಒಂದೆರಡು ಹನಿ ಶ್ರೀಗಂಧದ ಎಣ್ಣೆಯನ್ನು ಬಳಸಿದರೆ ಸಾಕು.