ಬ್ರಿಜ್ ಭೂಷಣ್ ಸಿಂಗ್ ಚುನಾವಣಾ ಕಣದಿಂದ ಹೊರಕ್ಕೆ

(ನ್ಯೂಸ್ ಕಡಬ) newskadaba.com  ಹೊಸದಿಲ್ಲಿ, ಜು. 26. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಗಸ್ಟ್ 12ರಂದು ನಡೆಯಲಿರುವ ಚುನಾವಣಾ ಕಣದಿಂದ ಹೊರಬಿದ್ದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚುನಾವಣಾ ಅಧಿಕಾರಿ ನಿವೃತ್ತ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್, ಅರ್ಹ ಮತದಾರರ ಪಟ್ಟಿಯನ್ನು ಅಂತಿಮಪಡಿಸಿದ್ದು, ಅದರಲ್ಲಿ ಬ್ರಿಜ್ ಭೂಷಣ್ ಸಿಂಗ್ ಹಾಗೂ ಉತ್ತರ ಪ್ರದೇಶ ಕುಸ್ತಿ ಸಂಘದ ಅಧ್ಯಕ್ಷರಾಗಿರುವ ಅವರ ಕಿರಿಯ ಪುತ್ರ ಕರಣ್ ಅವರ ಹೆಸರು ಕೂಡಾ ಅಂತಿಮ ಪಟ್ಟಿಯಲ್ಲಿಲ್ಲ. ಇದರಿಂದಾಗಿ ರಾಜ್ಯ ಸಂಘವನ್ನು ಪ್ರತಿನಿಧಿಸಬೇಕಿದ್ದ ಇವರಿಬ್ಬರ ಬದಲು ಪ್ರೇಮ್ ಕುಮಾರ್ ಮಿಶ್ರಾ ಮತ್ತು ಸಂಜಯ್ ಸಿಂಗ್ ಮತದಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.

Also Read  ಹೊಸ ವರ್ಷದ ಆರಂಭದಲ್ಲೇ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ➤ ದಿನ ನಿತ್ಯದ ವಸ್ತುಗಳ ಬೆಲೆ ಮತ್ತೆ ಏರಿಕೆ

ಅಧ್ಯಕ್ಷ ಹಾಗೂ ಅವರ ಪುತ್ರ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಬಿಹಾರ ಕುಸ್ತಿ ಸಂಘದ ಅಧ್ಯಕ್ಷ ಹಾಗೂ ಬ್ರಿಜ್ ಭೂಷಣ್ ಅವರ ಅಳಿಯ ವಿಶಾಲ್ ಪ್ರತಾಪ್ ಸಿಂಗ್ ಹೆಸರು ಪಟ್ಟಿಯಲ್ಲಿದ್ದು, ರಾಜ್ಯದ ಪರವಾಗಿ ವಿನಯ್ ಕುಮಾರ್ ಸಿಂಗ್ ಜತೆ ವಿಶಾಲ್ ಮತದಾನ ಮಾಡುವ ಅರ್ಹತೆ ಪಡೆದಿದ್ದಾರೆ. ಬ್ರಿಜ್ ಭೂಷಣ್ ಅವರ ಹುದ್ದೆಗೆ ಇವರಿಬ್ಬರು ಉತ್ತರಾಧಿಕಾರಿಗಳು ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ತಂದೆ- ಮಗನ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಭಾರತೀಯ ಕುಸ್ತಿ ಒಕ್ಕೂಟದಲ್ಲಿ ಬಿಜೆಪಿ ಮುಖಂಡನ ಯುಗ ಮುಗಿದಂತಾಗಿದೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.

Also Read  ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ➤ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

error: Content is protected !!
Scroll to Top