ಫೇಸ್ ಬುಕ್ ತಂದಿಟ್ಟ ಆಪತ್ತು – ಪಾಕಿಸ್ತಾನದ ಗೆಳೆಯನನ್ನು ವರಿಸಿದ ಭಾರತೀಯ ಮಹಿಳೆ

(ನ್ಯೂಸ್ ಕಡಬ) newskadaba.com ಪೇಷಾವರ, ಜು. 26. ಫೇಸ್‍ಬುಕ್ ಮೂಲಕ ಪರಿಚಯಗೊಂಡಿದ್ದ ಪಾಕಿಸ್ತಾನದ ಗೆಳೆಯನನ್ನು ಹುಡುಕಿಕೊಂಡು ಪಾಕ್‍ಗೆ ತೆರಳಿದ್ದ ಭಾರತದ ವಿವಾಹಿತ ಮಹಿಳೆ ಅಂಜು, ಆತನನ್ನು ವಿವಾಹವಾಗಿರುವ ಕುರಿತು ವರದಿಯಾಗಿದೆ.


ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ರಾಜಸ್ತಾನದ ನಿವಾಸಿ ಅಂಜು ಎಂಬಾಕೆಗೆ 2019ರಲ್ಲಿ ಫೇಸ್ ಬುಕ್ ಮೂಲಕ ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ನಿವಾಸಿ ನಸ್ರುಲ್ಲಾ ಎಂಬಾತನ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಆತ್ಮೀಯರಾಗಿದ್ದರು. ಗುರುವಾರದಂದು ಜೈಪುರಕ್ಕೆ ಭೇಟಿ ನೀಡುವುದಾಗಿ ಪತಿ ಅರವಿಂದ್‍ಗೆ ಹೇಳಿ, ಮಕ್ಕಳನ್ನು ಮನೆಯಲ್ಲೇ ಬಿಟ್ಟು ತೆರಳಿದ ಅಂಜು ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿ ನಸ್ರುಲ್ಲಾನನ್ನು ಭೇಟಿಯಾಗಿದ್ದಾಳೆ.

Also Read  ಹತ್ರಾಸ್ ರೇಪ್ & ಮರ್ಡರ್ ಕೇಸ್ ಖಂಡಿಸಿ ಬಿ. ಸಿ ರೋಡ್ ನಲ್ಲಿ ಮೊಂಬತ್ತಿ ಜಾಥಾ

ಇದೀಗ ಇವರಿಬ್ಬರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಎದುರು ವಿವಾಹವಾಗಿದ್ದು ಇಸ್ಲಾಂ ಧರ್ಮಕ್ಕೆ ಸ್ವೀಕರಿಸಿದ ಅಂಜು ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ತಾನು ಸ್ವಇಚ್ಛೆಯಿಂದ ಪಾಕ್‍ಗೆ ಬಂದಿದ್ದು ಇಲ್ಲಿ ಖುಷಿಯಾಗಿದ್ದೇನೆ ಎಂದು ಭಾರತೀಯ ಮಹಿಳೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾಳೆ. ಬಳಿಕ ಇಬ್ಬರನ್ನೂ ಬಿಗಿ ಭದ್ರತೆಯೊಂದಿಗೆ ನಸ್ರುಲ್ಲಾನ ಮನೆಗೆ ತಲುಪಿಸಲಾಗಿದೆ ಎಂದು ವರದಿಯಾಗಿದೆ.

error: Content is protected !!
Scroll to Top