ನಿಡ್ಪಳ್ಳಿ ಗ್ರಾ.ಪಂ. ಉಪಚುನಾವಣಾ ಫಲಿತಾಂಶ ಪ್ರಕಟ- ಗೆಲುವಿನ ನಗೆ ಬೀರಿದ ಕಾಂಗ್ರೆಸ್ ಅಭ್ಯರ್ಥಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 26. ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾಮ ಪಂಚಾಯತ್ ಗಳ ಬ್ಬರು ಸದಸ್ಯರ ನಿಧನದಿಂದ ತೆರವಾಗಿರುವ ರಡು ಸ್ಥಾನಗಳಿಗೆ ಜು. 23ರಂದು ಚುನಾವಣೆ ನಡೆದಿದ್ದು, ಇದೀಗ ಫಲಿತಾಂಶ ಪ್ರಕಟಗೊಂಡಿದೆ.

ಈ ಮೊದಲು ನಿಡ್ಪಳ್ಳಿ ಗ್ರಾಮ ಪಂಚಾಯತ್ ನಲ್ಲಿ ಸದಸ್ಯರಾಗಿದ್ದ ಮುರಳೀಕೃಷ್ಣ ಭಟ್ ನಿಧನರಾದ ಹಿನ್ನೆಲೆ ಆ ಸ್ಥಾನ ತೆರವಾಗಿತ್ತು. ಪುತ್ತೂರು ತಾಲೂಕು ಕಛೇರಿಯಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಭಾರೀ ಪೈಪೋಟಿ ಹೊಂದಿದ್ದ ನಿಡ್ಪಳ್ಳಿ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಶೆಟ್ಟಿ ಗೆಲುವಿನ ನಗೆ ಬೀರಿದ್ದಾರೆ. ಜಗನ್ನಾಥ ರೈ 208 ಮತ, ಸತೀಶ್ ಶೆಟ್ಟಿ 235 ಮತ,ಹಾಗೂ ಚಂದ್ರಶೇಖರ 85 ಮತಗಳನ್ನು ಪಡೆದರೆ 1 ಮತ ತಿರಸ್ಕೃತಗೊಂಡಿದೆ. ನಿಡ್ಪಳ್ಳಿ ಗರಾಮ ಪಂಚಾಯತ್ ನಿಂದ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಗನ್ನಾಥ್ ರೈ ಕೊಳೆಂಬೆತ್ತಿಮಾರು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಪ್ರಭು ಕಣದಲ್ಲಿದ್ದರು.

Also Read  ಆಸಿಫಾಳ ಹತ್ಯೆ ಖಂಡಿಸಿ ಕನ್ಯಾನದಲ್ಲಿ ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲುತೂರಾಟ ► ಬಲಾತ್ಕಾರದ ಬಂದನ್ನು ತಡೆಯಲು ತೆರಳಿದ ವಿಟ್ಲ ಪೊಲೀಸರಿಗೆ ಯುವಕರ ಗುಂಪಿನಿಂದ ದಿಗ್ಬಂಧನ

error: Content is protected !!
Scroll to Top