ಸಚಿವರ ವರ್ತನೆಯಿಂದ ಅಸಮಾಧಾನ- ಶಾಸಕರಿಂದ ಮುಖ್ಯಮಂತ್ರಿಗೆ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 25. ರಾಜ್ಯ ಸರ್ಕಾರದಲ್ಲಿ ಸಚಿವರ ವಿರುದ್ಧ ಶಾಸಕರಿಗೆ ಅಸಮಾಧಾನ ಭುಗಿಲೆದ್ದಿದ್ದು, ಈ ಕುರಿತು ಕೆಲವು ಶಾಸಕರು ಪತ್ರದ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ದೂರು ನೀಡಿದ್ದಾರೆ.

ಈ ಮೂಲಕ ಕಾಂಗ್ರೆಸ್ ನಲ್ಲಿನ ಕೆಲವು ಸಚಿವರ ಮತ್ತು  ಶಾಸಕರ  ನಡುವೆ ಅಸಮಾಧಾನ ಇರುವುದು ಕಂಡು ಬಂದಿದೆ.  ಸಿಎಂ ಸಿದ್ಧರಾಮಯ್ಯಗೆ ಶಾಸಕರು, ಪರಿಷತ್ ಸದಸ್ಯರಿಂದ ಪತ್ರದಲ್ಲಿ ಸಚಿವರ ದುರಹಂಕಾರಕ್ಕೆ ಬುದ್ದಿ ಹೇಳಿ ಎಂಬುದಾಗಿ ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ. ಶಾಸಕ ಬಸವರಾಜ ರಾಯ ರೆಡ್ಡಿ, ಎಂ.ಕೃಷ್ಣಪ್ಪ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಸಚಿವರ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲಾಗಿದೆ.

Also Read  ಆಲಂಕಾರು: ರಬ್ಬರ್ ಮರಕ್ಕೆ ಬೇರು ರೋಗ ► ರಬ್ಬರ್ ಬೆಳೆಗಾರರಲ್ಲಿ ಆತಂಕ

ದೂರಿನಲ್ಲಿ ಸಚಿವರಾರು ಕೆಲಸ ಮಾಡಿ ಕೊಡಲು ಆಸಕ್ತಿ ವಹಿಸುತ್ತಿಲ್ಲ. ಸಚಿವರು ವರ್ಗಾವಣೆ ದಂಧೆಯಲ್ಲಿ ಮುಳುಗಿದ್ದಾರೆ. ಹೀಗಾಗಿ ಶಾಸಕಾಂಗ ಸಭೆ ಕರೆದು ಸರಿ ಮಾಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top