ದೀಪಕ್, ಬಶೀರ್ ರಕ್ಷಿಸಲು ಯತ್ನಿಸಿ ಮಾನವೀಯತೆ ಮೆರೆದವರಿಗೆ ನಗದು ಪುರಸ್ಕಾರ ► ತಲಾ 50 ಸಾವಿರ ನಗದು ನೀಡಿ ಗೌರವಿಸಿದ ಗುಲ್ಬರ್ಗದ‌ ವಕೀಲ ವಿಲಾಸ್ ಕುಮಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ.30. ಇತ್ತೀಚೆಗೆ ಮತೀಯ ಸಂಘರ್ಷಕ್ಕೆ ಬಲಿಯಾದ ದೀಪಕ್ ರಾವ್ ಮತ್ತು ಬಶೀರ್ ರವರ ಪ್ರಾಣ ಉಳಿಸಲು ಪ್ರಯತ್ನಿಸಿದ ಅಬ್ದುಲ್ ಮಜೀದ್ ಹಾಗೂ ಶೇಖರ್ ಕುಲಾಲ್ ಅವರಿಗೆ ಗುಲ್ಬರ್ಗದ ವಕೀಲರೋರ್ವರು 50 ಸಾವಿರ ನಗದು ಪುರಸ್ಕಾರ ನೀಡಿ ಗೌರವಿಸಿದರು.

ದುಷ್ಕರ್ಮಿಗಳ ದಾಳಿಗೆ ಬಲಿಯಾದ ದೀಪಕ್ ರಾವ್ ಕೊಲೆಯಾದ ಸಂದರ್ಭದಲ್ಲಿ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ್ದ ಮಜೀದ್ ದೀಪಕ್ ನ ಪ್ರಾಣ ಉಳಿಸಲು ಯತ್ನಿಸಿದ್ದರು. ಅಂದು ರಾತ್ರಿ ದೀಪಕ್ ರಾವ್ ಹತ್ಯೆಗೆ ಪ್ರತಿಯಾಗಿ ನಡೆದ ದಾಳಿಗೆ ಹಲ್ಲೆಗೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಶೀರ್ ಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದ ಶೇಖರ್ ಜೀವ ಕಾಪಾಡಲು ಪ್ರಯತ್ನ ಮಾಡಿದ್ದ ಹಿನ್ನೆಲೆಯಲ್ಲಿ ಗುಲ್ಬರ್ಗದ ವಕೀಲರಾದ ಪಿ. ವಿಲಾಸ್ ಕುಮಾರ್ ವೈಯಕ್ತಿಕವಾಗಿ ತಲಾ 50 ಸಾವಿರ ರೂ. ಗಳನ್ನು ಇಬ್ಬರಿಗೂ ನೀಡಿದ್ದಾರೆ. ಇವರಿಬ್ಬರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರದಂದು ಚೆಕ್ ಹಸ್ತಾಂತರಿಸಿದರು.

Also Read  ಕಡಬ: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಲವು ವಾಹನಗಳು ಸೀಝ್ ➤ ಅನಗತ್ಯ ರಸ್ತೆಗಿಳಿಯದಂತೆ ಎಸ್ಐ ರುಕ್ಮನಾಯ್ಕ್ ಮನವಿ

error: Content is protected !!
Scroll to Top